ಸಾಮಾನ್ಯವಾಗಿ ಪ್ರತಿಯೊಬ್ಬರು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸ್ನಾನ ಮಾಡಿದರೂ ಕೂಡ ದೇಹದ ಈ ಮೂರು ಭಾಗಗಳಿಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಇದು ಚರ್ಮದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡುವುದು ಸೂಕ್ತ.
ಕಂಪ್ಲಿ-ಕೋಟೆ ಚೆಕ್ ಪೋಸ್ಟ್ ನಲ್ಲಿ 8 ಲಕ್ಷ 23 ಸಾವಿರ ರೂ ಹಣ ವಶಕ್ಕೆ ಪಡೆದ ಪೊಲೀಸರು!
ಕಿವಿಯ ಹಿಂಭಾಗ: ಹೆಚ್ಚಿನ ಜನರು ಕಿವಿಯ ಹಿಂದೆ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಆದ್ದರಿಂದ ಕಿವಿಯ ಹಿಂದೆ ಬೆರಳಿಂದ ಉಜ್ಜಬೇಕು ಮತ್ತು ಬರುವ ವಾಸನೆಯನ್ನು ಗಮನಿಸಬೇಕು. ಕಿವಿಗಳ ಹಿಂದೆ ತಲೆಹೊಟ್ಟು ಮತ್ತು ಚರ್ಮದ ಶುಷ್ಕತೆ ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಕಿವಿಯ ಹಿಂದೆ ಬೆರಳನ್ನು ಉಜ್ಜಿದಾಗಲೂ ಬೆರಳಿನ ಮೇಲೆ ಕಪ್ಪು ತ್ಯಾಜ್ಯ ಸಂಗ್ರಹವಾಗುವುದನ್ನು ಗಮನಿಸಬಹುದು. ಆದ್ದರಿಂದ ಪ್ರತೀ ಸ್ನಾನದ ನಂತರ ಒದ್ದೆ ಟವೆಲ್ನಿಂದ ಕಿವಿಯ ಹಿಂಭಾಗದಲ್ಲಿ ಕೊಳೆ ನಿಲ್ಲದಂತೆ ಸ್ವಚ್ಛಗೊಳಿಸಿ.
ಅನೇಕ ಜನರು ಉಗುರುಗಳ ಅಡಿಯಲ್ಲಿ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಆದ್ದರಿಂದ, ಕೊಳಕು ಮತ್ತು ಬ್ಯಾಕ್ಟೀರಿಯಾ ತೆಗೆದುಹಾಕಲು ಸರಿಯಾಗಿ ಸ್ಕ್ರಬ್ ಮಾಡುವುದು ಮುಖ್ಯ. ಉಗುರುಗಳ ಕೆಳಗೆ ಸರಿಯಾಗಿ ಸ್ವಚ್ಛಗೊಳಿಸಲು ಸೋಪ್ ಅನ್ನು ಸಹ ಬಳಸಬಹುದು. ಉಗುರುಗಳ ಒಳಭಾಗದಲ್ಲಿರುವ ಕೊಳೆ ನೀವು ಸೇವಿಸುವ ಆಹಾರದ ಜೊತೆಗೆ ಹೊಟ್ಟೆಯನ್ನು ಸೇರಿ ಸಾಕಷ್ಟು ಆರೋಗ್ಯ ಸಮಸ್ಯೆಯನ್ನುಂಟು ಮಾಡಬಹುದು
ದೇಹದ ಕೊಳಕು ಮತ್ತು ಬೆವರು ಸಾಮಾನ್ಯವಾಗಿ ಹೊಕ್ಕುಳಲ್ಲಿ ಸಂಗ್ರಹವಾಗುತ್ತದೆ. ಹೊಕ್ಕುಳಲ್ಲಿ ಸುಮಾರು 67 ವಿಧದ ಬ್ಯಾಕ್ಟೀರಿಯಾಗಳಿರುತ್ತವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದೆ. ಆದ್ದರಿಂದ ಪ್ರತೀ ಭಾರಿ ಸ್ನಾನ ಮಾಡುವಾಗಲೂ ಹೊಕ್ಕುಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಎಂದು ಚರ್ಮಶಾಸ್ತ್ರಜ್ಞರು ಎಚ್ಚರಿಸುತ್ತಾರೆ.