ಕೆಆರ್ ಪುರ: ಕೆ.ಆರ್.ಪುರದ ಐಟಿಐ ಮೈದಾನದಲ್ಲಿ ಜೆಮಿನಿ ಸರ್ಕಸ್ ಏರ್ಪಡಿಸಿದ್ದು 40 ದಿನಗಳ ಕಾಲ ಶೋ ನಡೆಯಲಿದೆ ಎಂದು ಜೆಮಿನಿ ಸರ್ಕಸ್ ನ ಪ್ರಮೋಟರ್ ಪ್ರೇಮನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಸರಾಂತ ಕಲಾವಿದರ ತಂಡದಿಂದ ಜೆಮಿನಿ ಸರ್ಕಸ್ ನಡೆಯಲಿದ್ದು ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ – ಈ ಕೆಲಸ ಮಾಡಿದ್ರೆ ಉಚಿತ LPG ಸಿಲಿಂಡರ್!
ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಾಸ್ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ರಜಾ ಕಾಲದಲ್ಲಿ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ ಬೆಂಗಳೂರಿನ ಕೆ.ಆರ್.ಪುರಂ ನ ದೂರವಾಣಿ ನಗರದ ಐಟಿಐ ಮೈದಾನದಲ್ಲಿ ಜೇಮಿನಿ ಸರ್ಕಸ್ ಪ್ರದರ್ಶನ ನಡೆಯುತ್ತಿದೆ ಕುಟುಂಬ ಸಮೇತ ಬಂದು ಮೂರು ಗಂಟೆಗಳ ಕಾಲ ಮನರಂಜನೆಯನ್ನ ಪಡೆದುಕೊಳ್ಳಬಹುದು ಎಂದು ಹೇಳಿದರು.
ಜೇಮಿನಿ ಸರ್ಕಸ್ ಪ್ರದರ್ಶನದಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯ ಹಾಗೂ ಭಾರತದ ವಿವಿಧ ರಾಜ್ಯಗಳ ಹೆಸರಾಂತ ಕಲಾವಿದರು ಪ್ರದರ್ಶನ ಮಾಡುತ್ತಿದ್ದಾರೆ. ದಿನನಿತ್ಯ ಮೂರು ಶೋ ಗಳು ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.