ಬೆಂಗಳೂರು:- ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ನಮಗಿಲ್ಲ ಎಂದು ದೇವೇಗೌಡರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮ ಪಕ್ಷಕ್ಕೆ ಐಟಿ ಇಲಾಖೆ 1823 ಕೋಟಿ ರೂ. ಕಟ್ಟಬೇಕೆಂದು ನೋಟಿಸ್ ಕೊಟ್ಟಿದೆ. ನಾವು ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
IPL 2024: ಆರ್ಸಿಬಿ- ಕೆಕೆಆರ್ ಕದನಕ್ಕೆ ಕ್ಷಣಗಣನೆ – ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಗೆಲುವು!
ನಮ್ಮ ಪಕ್ಷ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬ ಮಾಹಿತಿ ಇದೆ. ಈ ಹಿನ್ನಲೆ ಅಸೂಯೆಯಿಂದ ಹೆಚ್.ಡಿ.ದೇವೇಗೌಡರು ಮಾತನಾಡುತ್ತಿದ್ದಾರೆ. ಇವರೇ JDS ಪಕ್ಷವನ್ನು ವಿಲೀನ ಮಾಡಿಬಿಟ್ಟರೆಂಬ ನೋವು ಇದೆ. ವಿರೋಧ ಪಕ್ಷದವರು ಪ್ರಬಲವಾಗಿರಬೇಕು ಎಂದು ನಮ್ಮ ಆಸೆ. ಆದರೆ, ಇವರೇ ಬಿಜೆಪಿ ಜೊತೆಗೆ ಪಾರ್ಟಿ ವಿಲೀನ ಮಾಡುತ್ತಿದ್ದಾರಲ್ಲ. ಬಹಳ ದೊಡ್ಡ ನಾಯಕರು, ನಮ್ಮ ಪಾರ್ಟಿ ಸಂಪರ್ಕ ಮಾಡುತ್ತಿದ್ದಾರೆ. ಈಗ ಹೆಸರು ಹೇಳುವುದಕ್ಕೆ ಹೋಗುವುದಿಲ್ಲ ಎಂದರು.