ರಾಮನಗರ:- ತಮ್ಮ ಹೆಸರಿನ ಮತ್ತೋರ್ವ ವ್ಯಕ್ತಿ ಚುನಾವಣೆಗೆ ಸ್ಪರ್ಧೆ ಬಗ್ಗೆ ಡಾ ಸಿ.ಎನ್ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನನ್ನ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರೇನು ವೈದ್ಯರಲ್ಲ. ಇರಲಿ, ನಾನು ಯಾರ ಬಗ್ಗೆಯೂ ವಿರೋಧವಾಗಿ ಮಾತನಾಡಲ್ಲ ಎಂದಿದ್ದಾರೆ.
ಅದಿತಿ ರಾವ್ ಕೈ ಹಿಡಿಯಲಿರೋ ಸಿದ್ದಾರ್ಥ್ ಮೊದಲ ಮದುವೆ ಗೌಪ್ಯವಾಗಿ ಇಟ್ಟಿದ್ದೇಕೆ?
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯಲ್ಲಿ ಮಾತನಾಡಿ ‘ನಾನು ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ, ಇತರರ ಸ್ಪರ್ಧೆ ಬಗ್ಗೆ ಚಿಂತೆ ಬೇಡ. ಇದರಿಂದ ಯಾವುದೇ ಗೊಂದಲ ಉಂಟಾಗಲ್ಲ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತೇನೆ. ಈಗಾಗಲೇ ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದು, ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಗೆಲ್ಲಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಇದೆ ವೇಳೆ ನಿನ್ನೆ(ಮಾ.28) ರಾಮನಗರದಲ್ಲಿ ಕಾಂಗ್ರೆಸ್ ನಾಯಕರಿಂದ ಶಕ್ತಿ ಪ್ರದರ್ಶನ ವಿಚಾರ, ‘ಆ ಶಕ್ತಿ ಪ್ರದರ್ಶನಕ್ಕಿಂತ ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮುಖ್ಯ. ಮತ ಪತ್ರದಲ್ಲಿ ಶಕ್ತಿ ಪ್ರದರ್ಶನ ಇರಬೇಕು. ಕೆಲವೆಡೆ ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದವರೂ ಗೆದ್ದಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಡಾ.ಸಿ.ಎನ್.ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ
ಇನ್ನು ಕೋವಿಡ್ನಲ್ಲಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ನಾನು ಕೋವಿಡ್ ನಿರ್ವಹಣ ಸಮಿತಿಯಲ್ಲಿದ್ದೆ. ಆರುವರೆ ಏಳು ಕೋಟಿ ಜನರಿಗೆ ಆತಂಕ ಇತ್ತು. ಅವರಿಗೆ ಸಾಂತ್ವನ ಹೇಳುತ್ತಿದ್ದೆ, ಲಸಿಕೆ ಬಗ್ಗೆನೇ ಬಹಳ ಹಿಂಜರಿಕೆ ಇತ್ತು. ಅಂಥಹ ಸಂದರ್ಭದಲ್ಲಿ ನಾವೇ ಮೊದಲು ಲಸಿಕೆ ಪಡೆದುಕೊಂಡೆವು. ಕೋವಿಡ್ ಸಂದರ್ಭದಲ್ಲಿ ನಮ್ಮ ಆಸ್ಪತ್ರೆ ಯಲ್ಲಿ 700 ಸಿಬ್ಬಂದಿಗೆ ಕೋವಿಡ್ ಆಗಿತ್ತು. ಅವರೆಲ್ಲರಿಗೂ ನಾವು ಚಿಕಿತ್ಸೆ ಕೊಟ್ಟೆವು, ಅವರೆಲ್ಲ ಬದುಕಿದರು. ಕೋಟ್ಯಾಂತರ ವ್ಯಾಕ್ಸೀನ್ ಮೋದಿ ಸರಕಾರ ನೀಡಿದ ಪರಿಣಾಮ ಬಹಳ ಪ್ರಾಣಗಳು ಉಳಿದಿವೆ. ಜೊತೆಗೆ ಹೃದಯಕ್ಕೆ ಹಾಕುವ ಸ್ಟಂಟ್ ಒಂದು ಲಕ್ಷ , ಕೆಲವು ಕಡೆ 70 ಸಾವಿರ ರೂ. ಇತ್ತು. ಅದನ್ನು ಮೋದಿ ಅವರಿಗೆ ತಿಳಿಸಿ 25 ಸಾವಿರಕ್ಕೆ ಇಳಿಸಿದೆ. ಜನ ಆ ಕ್ಷಣದ ಲಾಭ ನೋಡಬಾರದು, ಶಾಶ್ವತ ಪರಿಹಾರವನ್ನು ನೋಡಬೇಕು ಎಂದು ಹೇಳಿಕೆ ನೀಡಿದ್ದಾರೆ.