ಗದಗ: ಚಿರತೆ ಪ್ರತ್ಯಕ್ಷವಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಹಾಗೂ ಕುಂಟೋಜಿ ಗ್ರಾಮಗಳ ನಡುವಿನ ಮೋಕಾ ಗುಡ್ಡ ಪ್ರದೇಶದಲ್ಲಿ ನಡೆದಿದೆ. ರಸ್ತೆಯ ಪಕ್ಕದಲ್ಲೇ ಇರೋ ಬೆಟ್ಟವಾಗಿದ್ದು, ಬೆಟ್ಟದ ಮೇಲೆ ಚಿರತೆ ಓಡಾಡ್ತಿತ್ತು. ಈ ಹಿಂದೆ ಇದೇ ಮೋಕಾ ಪ್ರದೇಶದಲ್ಲಿ ಓಡಾಡಿದ್ದ ಚಿರತೆ,
ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದನ್ನು ಕಂಡು ಜಮೀನುಗಳಿಗೆ ಹೋಗಲು ಭಯಪಡ್ತಿರೋ ಜನ್ರು. ರಸ್ತೆಯುದ್ದಕ್ಕೂ ನಿಂತು ಚಿರತೆ ವೀಕ್ಷಣೆಗೆ ಜನರು ಮುಂದಾಗಿದ್ದರು. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡ್ತಿದ್ದಾರೆ. ಇನ್ನೂ ಚಿರತೆ ವಿಡಿಯೋ ಫುಲ್ ವೈರಲ್ ಆಗಿದೆ.