ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿನಿಮಾ ರಂಗದ ನಟ, ನಟಿಯರು ಕೆಲವು ಪಕ್ಷಕ್ಕೆ ಎಂಟ್ರಿಕೊಡ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನಟ ಗೋವಿಂದ್ ಶಿಂಧೆ ಪಕ್ಷ ಸೇರಿಕೊಂಡಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕೆಲ ವರ್ಷಗಳಿಂದ ದೂರವಿದ್ದ ಬಾಲಿವುಡ್ ನಟ ಗೋವಿಂದ್ ಮತ್ತೆ ರಾಜಕಾರಣಕ್ಕೆ ವಾಪಸ್ಸಾಗಿದ್ದಾರೆ. ಲೋಕಸಮರಕ್ಕೆ ಇಳಿಯುವುದಕ್ಕಾಗಿಯೇ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆಯೇ ಗೋವಿಂದ್ ಶಿವಸೇನೆ ಸೇರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಏಕನಾಥ ಶಿಂಧೆ ಅವರನ್ನೂ ಗೋವಿಂದ್ ಭೇಟಿ ಮಾಡಿದ್ದರು. ವಾಯವ್ಯ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಇಳಿಯುವ ಕುರಿತು ಚರ್ಚೆ ಮಾಡಿದ್ದರು. ಆದರೆ ಈಗ ಅದು ಅಧಿಕೃತವಾಗಿದೆ. ಶಿವಸೇನೆ ಸೇರ್ಪಡೆಗೊಂಡನಂತರ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ.
2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಗೋವಿಂದ್ ಬಿಜೆಪಿಯ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಸಾಕಷ್ಟು ಅಂತರದಿಂದ ಸೋಲಿಸಿದ್ದರು. ಗೋವಿಂದ್ ಅವರ ಜನಪ್ರಿಯತೆ ಅದಕ್ಕೆ ಸಾಥ್ ಕೂಡ ನೀಡಿತ್ತು.
ಈಗಾಗಲೇ ವಾಯುವ್ಯ ಮುಂಬೈ ಕ್ಷೇತ್ರದಿಂದ ಉದ್ಭವ್ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಇಪ್ಪತ್ತು ವರ್ಷಗಳ ನಂತರ ಮತ್ತೆ ಗೋವಿಂದ್ ರಾಜಕೀಯ ಪ್ರವೇಶ ಮಾಡಿದ್ದು ಈ ಭಾರಿ ಅಭ್ಯರ್ಥಿಗಳು ಅವರ ಕೈ ಹಿಡಿಯುತ್ತಾರಾ ಕಾದು ನೋಡಬೇಕಿದೆ.