ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಪಡೆದುಕೊಂಡ ನಾಗ ಚೈತನ್ಯ ಹಾಗೂ ಸಮಂತಾ ಸದ್ಯ ತಮ್ಮ ಕೆರಿಯರ್ ಮೇಲೆ ಗಮನ ಹರಿಸಿದ್ದಾರೆ. ಈ ಜೋಡಿ ದೂರವಾಗಲು ಕಾರಣವೇನು ಎಂಬುದು ಮಾತ್ರ ನಿಗೂಡವಾಗಿಯೇ ಉಳಿದಿತ್ತು. ಇದೀಗ ಈ ಜೋಡಿ ದೂರವಾದ ನಾಲ್ಕು ವರ್ಷಗಳ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಗೆ ಕಾರಣವೇನು ಎಂಬುದು ತಿಳಿದು ಬಂದಿದೆ.
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸದೆ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದರು. ಅಂದಿನಿಂದ ಅವರು ಪ್ರತ್ಯೇಕವಾಗಿದ್ದು ತಮ್ಮ ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವದಂತಿಗಳಿಗೆ ತೆರೆ ಬಿದ್ದಿತ್ತು..
ಸದ್ಯ ಸುದ್ದಿಯಲ್ಲಿರೋ ಫೋನ್ ಕದ್ದಾಲಿಕೆ ವಿಚಾರ ದೇಶವನ್ನೇ ನಡುಗಿಸಿದೆ. ಇದರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಹೆಸರುಗಳು ಮುನ್ನೆಲೆಗೆ ಬಂದಿದೆ. ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದ ತೆಲಂಗಾಣ ಸರ್ಕಾರಿ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಬಂಧಿಸಿ ತನಿಖೆ ನಡೆಸಿದ ಬಳಿಕ ಸಂವೇದನೆಯ ವಿಷಯಗಳು ಬೆಳಕಿಗೆ ಬರುತ್ತಿದ್ದು.. ಹಿಂದಿನ ಸರ್ಕಾರ ಕೆಲವು ಸಿನಿಮಾ ನಾಯಕ-ನಾಯಕಿಯರ ಫೋನ್ ಕರೆಗಳ ಮೇಲೆ ಕಣ್ಣಿಟ್ಟಿದ್ದು ಸಿನಿ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದೇ ವೇಳೆ ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡುವಾಗ ಯೂಟ್ಯೂಬರ್ ತೀನ್ಮಾರ್ ಮಲ್ಲಣ್ಣ ಅವರು ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಇದು ಕೂಡ ಕಾರಣ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆಗಿನ ಆಡಳಿತ ಪಕ್ಷದ ಪ್ರಮುಖ ನಾಯಕ, ಡ್ರಗ್ ಡೀಲರ್ ಮಧ್ಯಸ್ಥಿಕೆಯಿಂದ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದಿದ್ದಾರೆ ಎಂದಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನವನ್ನು ಬಹುತೇಕ ಎಲ್ಲರೂ ಮರೆತುಬಿಡುತ್ತಿರುವ ಈ ಸಮಯದಲ್ಲಿ, ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ ಈ ಜೋಡಿ ಹೆಸರು ಕೇಳಿ ಬಂದಿರುವುದು ಎಲ್ಲರೂ ಶಾಕ್ ಆಗಿದೆ.