ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಮಗಳು ರಹಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕ್ರಿಸ್ ಮಸ್ ಸಂದರ್ಭದಲ್ಲಿ ಮಗಳ ಮುಖ ರಿವೀಲ್ ಮಾಡಿದ್ದ ದಂಪತಿ ಆ ಬಳಿಕ ಸಾಕಷ್ಟು ಭಾರಿ ಮಗಳ ಜೊತೆ ಸಾರ್ವಜನಿಕರವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ರಹಾ ಅತಿ ಶ್ರೀಮಂತ ಸ್ಟಾರ್ ಕಿಡ್ ಎನಿಸಿಕೊಂಡಿದ್ದಾಳೆ.
ರಣಬೀರ್ ಕಪೂರ್ ಹಾಗೂ ಆಲಿಯಾಗೆ 2022ರಲ್ಲಿ ಮದುವೆ ಆಯಿತು. ಅದೇ ವರ್ಷ ದಂಪತಿಗೆ ರಹಾ ಹಟ್ಟಿದ್ದಾಳೆ. ರಣಬೀರ್ ಹಾಗೂ ಆಲಿಯಾ ಬಾಂದ್ರಾದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು, ಈ ಮನೆಯನ್ನು ಮಗಳು ರಹಾ ಹೆಸರಲ್ಲಿ ನೋಂದಣಿ ಮಾಡಿಸಲು ನಿರ್ಧರಿಸಿದ್ದಾರೆ.
ಬಾಂದ್ರಾದಲ್ಲಿ ಜಾಗದ ಬೆಲೆ ಗಗನಕ್ಕೇರಿದೆ. ಇಂಥ ಜಾಗದಲ್ಲಿ ಆಲಿಯಾ-ರಣಬೀರ್ ಮನೆ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಈ ಮನೆಯನ್ನು ಸಾಕಷ್ಟು ಐಷಾರಾಮಿ ಆಗಿ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಛ ತಗುಲಿದೆ ಎನ್ನಲಾಗುತ್ತಿದೆ. ಈ ಮನೆ ಶಾರುಖ್ ಖಾನ್ ಅವರ ಮನ್ನತ್ ಹಾಗೂ ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇದೆ.
ಒಂದೊಮ್ಮೆ ಈ ಮನೆ ರಹಾ ಹೆಸರಲ್ಲಿ ನೋಂದಣಿ ಆದರೆ ರಹಾ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್ ಎನಿಸಿಕೊಳ್ಳಲಿದ್ದಾಳೆ. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಸದ್ಯ ಈ ಜೋಡಿ ಮನೆ, ಮಗುವಿನ ಜೊತೆಗೆ ಸಿನಿಮಾ ರಂಗದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ.