ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದ ಬೆಟ್ಟದ ಮಲ್ಲೇಶ್ವರ ಬೀದಿಯ ಮಹಿಳೆಯರಿಂದ ನೀರಿಗಾಗಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಪುರಸಭೆ ಎದುರು ಖಾಲಿ ಕೊಡಗಳೊಂದಿಗೆ ಸ್ತ್ರೀಯರು ಪ್ರತಿಭಟನೆ ನಡೆಸಿದ್ದು, ನಮಗೆ ಕುಡಿಯಲು ಸಮರ್ಪಕ ನೀರು ಬರ್ತಿಲ್ಲ,
1 ವಾರದಿಂದ ಸಮರ್ಪಕ ನೀರು ಇಲ್ದೆ ನಗರವಾಸಿಗಳು ಹೈರಾಣ ಆಗಿದ್ದಾರೆ. ಕುಡಿಯುವ ನೀರು ಬಾರದ ಹಿನ್ನಲೆ ಅಲ್ಲಲ್ಲಿ ಕುಡಿಯುವ ನೀರು ಸಂಗ್ರಹಿಸಿ ಮಹಿಳೆಯರು ಕಂಗಾಲು ಆಗಿದ್ದಾರೆ.
ಆದ್ದರಿಂದ ಮಹಿಳೆಯರು ಬ್ಯಾಡಗಿ ಪುರಸಭೆ ಮುಂದೆ ಖಾಲಿ ಬಿಂದಿಗೆ ಹಿಡಿದು ಧರಣಿ ನಡೆಸಿದ್ದಾರೆ. ಹೊಳೆ ನೀರು ಇಲ್ಲ ಬೋರವೇಲ್ ನೀರು ಇಲ್ಲ ನಮ್ಮ ಗತಿ ಏನು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.