ಬೆಂಗಳೂರು: ಫ್ರೀ ಟಿಕೆಟ್ ಎಂದು ಬಸ್ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್ ನೀಡಿದ ಟಿಕೆಟ್ ದೊಡ್ಡ ಶಾಕ್ ನೀಡಿದೆ. ಸರ್ಕಾರದ ಫ್ರೀ ಬಸ್ ಯೋಜನೆ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್.. ನಾಲ್ಕು ಲವ್ ಬರ್ಡ್ಸ್ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್..
ಅಬ್ಬಬ್ಬಾ.. ಏನ್ ಗುರು ಇದು, ಕೆಎಸ್ಆರ್ಟಿಸಿ ಮಹಿಮೆ.. ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ಕೊಡ್ತಾರಂತೆ.. ಅವರು ತೆಗೆದುಕೊಂಡು ಹೋದ ಪಕ್ಷಿಗಳಿಗೆ ಮಾತ್ರ ದುಡ್ಟು ಕೊಟ್ಟು ಟಿಕೆಟ್ ತೆಗೆದುಕೊಳ್ಳಲೇಬೇಕಂತೆ.. ಅದು ಹತ್ತು – ಇಪ್ಪತ್ತು ರೂಪಾಯಿಯಲ್ಲ.. ಹತ್ರತ್ರ ಸುಮಾರು 500 ರೂಪಾಯಿ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ಕೊಟ್ಟಿದ್ದು, ಅವರು ತೆಗೆದುಕೊಂಡು ಹೋಗುತ್ತಿದ್ದ ನಾಲ್ಕು ಪಕ್ಷಿಗಳಿಗೆ 444 ರೂ. ಮೌಲ್ಯದ ಟಿಕೆಟ್ ಅನ್ನು ಕಂಡಕ್ಟರ್ ಕೊಟ್ಟಿದ್ದಾರೆ. ಮಹಿಳೆ ಯಾಕೆ ಎಂದು ಕೇಳಿದರು ಕೂಡ ಟಿಕೆಟ್ ಕೊಟ್ಟಿದ್ದರಿಂದ ಅನಿವಾರ್ಯವಾಗಿ ದುಡ್ಡು ಕೊಟ್ಟು ಅಜ್ಜಿ – ಮೊಮ್ಮಗಳು ಬಸ್ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.
ಬೆಂಗಳೂರು ಟು ಮೈಸೂರುರಿಗೆ ಹೋಗುತ್ತಿದ್ದ ಅಜ್ಜಿ ಮೊಮ್ಮಗಳು.. ಇಂದು ಬೆಳಿಗ್ಗೆ 08-18 ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು.. ಮೊಮ್ಮಗಳ ಜೊತೆ ನಾಲ್ಕು ಲವ್ ಬರ್ಡ್ಸ್ ಹಕ್ಕಿಗಳನ್ನ ತೆಗೆದುಕೊಂಡು ಹೋದ ಅಜ್ಜಿ.. ಅಜ್ಜಿಗೆ ಫ್ರೀ ಟಿಕೆಟ್, ಮೊಮ್ಮಗಳಿಗೆ ಫ್ರೀ ಟಿಕೆಟ್ ಆದರೆ, ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್.. ಇಂದು ಕೆಎಸ್ ಆರ್ ಟಿಸಿ ಬಸ್ ನಲ್ಲಿ ನಡೆದ ಘಟನೆ.. ನಾಲ್ಕು ಮಕ್ಕಳು ಎಂದು ಟಿಕೆಟ್ ನಲ್ಲಿ ನಮೂದು. ಹಕ್ಕಿಗಳಿಗೆ ಮಕ್ಕಳೆಂದು ಪರಿಗಣಿಸಿ ತಲಾ ಲವ್ ಬರ್ಡ್ಸ್ ಗೆ 111 ರೂಪಾಯಿ ಟಿಕೆಟ್.. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ..!
ಮಾರ್ಚ್ 27ರಂದು ಬೆಳಗ್ಗೆ 8 ಗಂಟೆಗೆ ಅಜ್ಜಿ – ಮೊಮ್ಮಗಳು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು 4 ಲವ್ ಬರ್ಡ್ಸ್ಗಳನ್ನು ಪಂಜರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಡಕ್ಟರ್ ಅಜ್ಜಿ – ಮೊಮ್ಮಗಳಿಗೆ ಶಕ್ತಿ ಯೋಜನೆಯಡಿ ಝೀರೋ ಟಿಕೆಟ್ ಕೊಟ್ಟಿದ್ದಾರೆ. ಆದರೆ, ನಾಲ್ಕು ಲವ್ ಬರ್ಡ್ಸ್ಗಳಿಗೆ ತಲಾ ಒಂದಕ್ಕೆ 111 ರೂ. ನಂತೆ ಒಟ್ಟು 444 ರೂ. ಟಿಕೆಟ್ ನೀಡಿದ್ದಾನೆ. ಪಕ್ಷಿಗಳನ್ನು ಮಕ್ಕಳಂತೆ ಪರಿಗಣಿಸಿ ಅರ್ಧ ಟಿಕೆಟ್ ಅನ್ನು ನಿರ್ವಾಹಕ ನೀಡಿದ್ದಾನೆ.