ಚೆನ್ನೈನ ಚೆಪುಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಬಂದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ದರು. ಗುಜರಾತ್ ಟೈಟನ್ಸ್ಗೆ ಚೆನ್ನೈ ಸೂಪರ್ ಕಿಂಗ್ಸ್ 206 ರನ್ ಟಾರ್ಗೆಟ್ ನೀಡಿದೆ.
ಚಿಕ್ಕಮಗಳೂರು: ದಾಖಲೆ ಇಲ್ಲದ : 4 ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ಸೀಜ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಚಿನ್ ರವೀಂದ್ರ ಜಿಟಿ ವಿರುದ್ಧ ಅಬ್ಬರಿಸಿ ಬೊಬ್ಬರಿದಿದ್ದಾರೆ. ರಚಿನ್ ಅಬ್ಬರ ಕಂಡು ಫ್ಯಾನ್ಸ್ ರಚಿನ್, ಅಲ್ಲ ಚಚ್ಚಿನ್ ರವೀಂದ್ರ ಇವ್ರು ಅಂತ ಹೇಳುತ್ತಿದ್ದಾರೆ.ಕೇವಲ 20 ಬಾಲ್ಗಳಲ್ಲಿ 46 ರನ್ಗಳಿಸಿ ರಚಿನ್ ರವೀಂದ್ರ ಔಟಾದ್ರು. ಓಪನಿಂಗ್ನಿಂದಲೂ ರಚಿನ್ ಅಬ್ಬರಿಸಿಕೊಂಡೇ ಬಂದ್ರು.
ಅರ್ಧ ಶತಕ ಅಂಚಿನಲ್ಲಿ ಔಟಾದರು.20 ಎಸೆತಗಳಲ್ಲಿ 6 ಬೌಂಡರಿ ಬಾರಿಸಿದ್ರು ರಚಿನ್ ರವೀಂದ್ರ. ಅತ್ತ ಗಾಯಕ್ವಾಡ್ ಕೂಡ ರಚಿನ್ ರವೀಂದ್ರಗೆ ಸಾಥ್ ಕೊಟ್ರು. ಚೆನ್ನೈ ಸೂಪರ್ ಕಿಂಗ್ಸ್ ಪವರ್ ಪ್ಲೇನಲ್ಲಿ 70 ರನ್ಗಳಿಸಿದ್ರು. ಇವರಿಗೆ ರುತುರಾಹ್ ಗಾಯಕ್ವಾಡ್ ಕೂಡ ಅದ್ಭುತವಾಗಿ ಆಡಿದ್ದಾರೆ. ಗಾಯಕ್ವಾಡ್ ಕೂಡ 46 ರನ್ಗಳಿಸಿ ಔಟಾಗಿದ್ರು. ಇನ್ನೂ ರಹಾನೆ ಈ ಪಂದ್ಯದಲ್ಲಿ ಮ್ಯಾಜಿಕ್ ಮಾಡಲಿಲ್ಲ. 12 ರನ್ಗಳಿಸಿ ಔಟಾದ್ರು
ಇನ್ನೂ ರಹಾನೆ ಔಟಾಗ್ತಿದ್ದಂತೆ ದುಬೆ ಎಂಟ್ರಿಯಾದ್ರು. ಅವರು ಬಂದ್ಮೇಲೆ ಕೇಳಬೇಕಾ? ಬಂದಾಗಿನಿಂದಲೂ ಸಿಕ್ಸರ್ ಸುರಿಮಳೆಗೈದ್ರು. ಅರ್ಧ ಶತಕ ಬಾರಿಸಿ ಮಿಂಚಿದರು. ಸ್ಪಿನ್ನರ್ಗಳಿಗಂತೂ ಸಿಕ್ಕಾಪಟ್ಟೆ ಕಾಟ ಕೊಟ್ರು ದುಬೆ. 51 ರನ್ಗಳಿಸಿ ದುಬೆ ಔಟಾದ್ರು. ಇವರ ನಂತ್ರ ಬಂದ ರಿಜ್ವಿ ಐಪಿಎಲ್ನ ಕೆರಿಯರ್ನ ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸಿದ್ರು. ರಿಜ್ವಿ ಕೂಡ ರನ್ ಗಳಿಸಿ ಔಟಾದ್ರು. ಮಿಚೆಲ್ ಕೂಡ 24 ರನ್ಗಳಿಸಿದ್ರು.