ಬೆಂಗಳೂರು: ಆಟೋ ಚಾಲಕರಿಗೆ ಒಂದಲ್ಲ..ಬಂದು ಸಮಸ್ಯೆ ಎದುರಾಗುತ್ತ ಹೋಗುತ್ತಿದೆ..ಎಲೆಕ್ಟ್ರಿಕ್ ಬೈಕ್ ಆಯ್ತು, ಇದೀಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ.. ಈ ಅಭಿಯಾನ ಮಾಡಲು ಉದ್ದೇಶವೇನು? ಈಗ ಇವರಿಗೆ ಆಗಿರುವ ಸಮಸ್ಯೆಯಾದ್ರು ಏನು ಅಂತ ನೀವೇ ನೋಡಿ…
ಕಳೆ ತಿಂಗಳ ಹಿಂದೆಯಷ್ಟೇ ಬೈಕ್ಗಳು ರ್ಯಾಪಿಡೋಗಳು ನಮ್ಮ ಬಾಳು ಆಳು ಮಾಡುತ್ತಿವೆ ಎಂದು ಆಟೋ ಚಾಲಕರು ಆಕ್ರೋಶಗೊಂಡಿದ್ರು… ಈ ಹಿನ್ನೆಲೆ ರ್ಯಾಪಿಡೋ ಬೈಕ್ ಜೊತೆ ಆಟೋ ಜೋರು ಪ್ರತಿಭಟನೆ ಮಾಡಿದ್ರು. ಈಗ ರ್ಯಾಪಿಡೋ ಆಟೋ ವಿರುದ್ಧ ಸಮರ ಸಾರಿದ್ದಾರೆ… ರ್ಯಾಪಿಡೋ ಇಟ್ಟುಕೊಂಡಿದ್ರೆ ಅವರ ಆಟೋ ಹುಡುಕಿ ಆಪ್ ಡಿಲೀಟ್ ಮಾಡಿಸುತ್ತಿರುವ ಚಾಲಕರು..
ಈಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರ ಅಭಿಯಾನ ಪ್ರಾರಂಭ ಮಾಡಿದ್ದಾರೆ.. ಇದರ ಮೊದಲ ಭಾಗವಾಗಿ ಆಟೋ ಚಾಲಕರ ಬಳಿ ರ್ಯಾಪಿಡೋ ಆ್ಯಪ್ ನ್ನು ಚಾಲಕರು ಡಿಲೀಟ್ ಮಾಡಿಸುತ್ತಿದ್ದಾರೆ… ಈ ಆಪ್ ನಲ್ಲಿ ವಿಶೇಷ ಸವಲತ್ತುಗಳಿದ್ದು ಅದರತ್ತ ಆಕರ್ಷಣೆಗೊಳ್ಳುತ್ತಿದ್ದಾರೆ..
ಈ ಆಪ್ ಆಫರ್ ಏನು?
ಆಟೋ ಲೇಟ್ ಆದ್ರೆ ಹಣ ಕಡಿಮೆ ಕೊಡಿ ಎಂದು ಆಪ್ ನಿಂದ ಆಮಿಷ
ಡ್ರೈವರ್ ಗಳಿಗೆ ಇನ್ಸೆಟಿಂವ್ ಕೊಡುವುದು…
ಫ್ಲಾಟ್ ಫಂಗೆ ೫ ರೂ. ಮಾತ್ರ ನಿಗದಿ ಮಾಡಿರುವುದು…
ಒಟ್ಟಿನಲ್ಲಿ ಈ ಆಫರ್ಸ್ ನೋಡಿ ಖುಷ್ ಆಗುವ ಚಾಲಕರು ಮತ್ತೆ ಗ್ರಾಹಕರು ರ್ಯಾಪಿಡೋ ದತ್ತ ಆಕರ್ಷಣೆಯಾಗುತ್ತಿದ್ದಾರೆ. ಇದು ಕೆಲ ಸಾಮಾನ್ಯ ಆಟೋ ಚಾಲಕರಿಗೆ ತೊಂದರೆಯಾಗುತ್ತಿದ್ದು, ರ್ಯಾಪಿಡೋ ವನ್ನೆ ನಮ್ಮದೇಶದಿಂದ ಮುಕ್ತಿಗಳಿಸಬೇಕು ಅಂತ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ…