ಬೆಂಗಳೂರು: ವಿರಾಟ್ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್ (Dinesh Karthik), ಮಹಿಪಾಲ್ (Mahipal Lomror) ಅವರ ಸಿಕ್ಸರ್ ಬೌಂಡರಿ ನೆರವಿನಿಂದ ಆರ್ಸಿಬಿ (RCB) ತವರಿನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಇದರ ಬೆನ್ನಲ್ಲೇ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮ ಅವರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಾಗೆ ಕೊಹ್ಲಿ ಅವರು ಪಂದ್ಯ ಮುಕ್ತಾಯದ ಬಳಿಕ ವಿಡಿಯೊ ಕರೆ ಮಾಡಿ ಪಂದ್ಯದಲ್ಲಿ ನಡೆದ ಸಂಗತಿಗಳನ್ನು ಪತ್ನಿಗೆ ವಿವರಿಸಿದ್ದಾರೆ.
ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿದ ಕಿಂಗ್ ಕೊಹ್ಲಿ ಪ್ಲೈನ್ ಕಿಸ್ ಕೊಡುವ ದೃಶ್ಯ ಕೂಡ ಅಭಿಮಾನಿಗಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಮಗಳೊಂದಿಗೆ ಕೊಹ್ಲಿ ವಿಡಿಯೋ ಕರೆಯಲ್ಲಿ ಮಾತನಾಡಿದಂತೆ ಘೋಚರಿಸಿದೆ. ಇವರ ಈ ಪ್ರೀತಿಗೆ ನೆಟ್ಟಿಗರು ಪ್ರೀತಿ ಎಂದರೆ ಹೀಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಪತಿಯ ಈ ಸಾಧನೆಗೆ ಪತ್ನಿ ಅನುಷ್ಕಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.