ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ಯಾಚೊಂದನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಆಟಗಾರ ಜಾನಿ ಬೇರ್ಸ್ಟೋ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 173 ನೇ ಕ್ಯಾಚ್ ಪೂರ್ಣಗೊಳಿಸಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರ ಪೈಕಿ ಮೊದಲ ಸ್ಥಾನಕ್ಕೇರಿದರು. ಈ ಹಿಂದೆ ಈ ದಾಖಲೆ ಮಾಜಿ ಆಟಗಾರ ಸುರೇಶ್ ರೈನಾ ಹೆಸರಿನಲ್ಲಿತ್ತು. ರೈನಾ ಅವರು 72 ಕ್ಯಾಚ್ಗಳನ್ನು ಪಡೆದಿದ್ದರು. ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಶರ್ಮ ಅವರು ಸದ್ಯ 167 ಕ್ಯಾಚ್ ಹಿಡಿದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 146 ಕ್ಯಾಚ್ ಪಡೆದ ಮನೀಷ್ ಪಾಂಡೆ ನಾಲ್ಕನೇ ಸ್ಥಾನ, 136 ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್ 5ನೇ ಸ್ಥಾನದಲ್ಲಿದ್ದಾರೆ.
ನಿಮ್ಮ ಒಂದು ಮತ ತಪ್ಪಾದ್ರೇ ಯಮ ಕಾಣಿಸ್ತಾನೆ – ಡಿಕೆ ಸುರೇಶ್ ಗೆ ಮುನಿರತ್ನ ಟಾಂಗ್!
ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 109 ಕ್ಯಾಚ್ಗಳನ್ನು ಪಡೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೆರಡು ಕ್ಯಾಚ್ಗಳ ಅಗತ್ಯವಿದೆ. ಸದ್ಯ ಕೊಹ್ಲಿ 108 ಕ್ಯಾಚ್ಗಳನ್ನು ಪಡೆದಿದ್ದಾರೆ. ಈ ಆವೃತ್ತಿಯಲ್ಲಿಯೇ ಕೊಹ್ಲಿ 2 ಕ್ಯಾಚ್ ಹಿಡಿದು ರೈನಾ ಐಪಿಎಲ್ ದಾಖಲೆಯನ್ನು ಕೂಡ ಮುರಿಯುವ ವಿಶ್ವಾಸದಲ್ಲಿದ್ದಾರೆ.
ಚೇಸಿಂಗ್ ವೇಳೆ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 3 ರನ್ಗೆ ಔಟಾಗುವುದರೊಂದಿಗೆ 26 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಬಂದ 10 ಕೋಟಿ ಮೌಲ್ಯದ ಆಟಗಾರ ಕ್ಯಾಮೆರೂನ್ ಗ್ರೀನ್ ಮತ್ತೊಂದು ಬಾರಿ ವೈಫಲ್ಯ ಕಂಡರಲ್ಲದೆ ಕೇವಲ 3 ರನ್ಗೆ ಔಟಾದರು. 43 ರನ್ಗಳಿಎಗ 2 ವಿಕೆಟ್ ಕಳೆದುಕೊಂಡ ಬಳಿಕ ಆರ್ಸಿಬಿಯ ರನ್ ಗಳಿಕೆ ವೇಗ ಕುಸಿಯಿತು. ನಂತರ ಬಂದ ರಜತ್ ಪಾಟೀದಾರ್ ಕೂಡ ಉತ್ತಮವಾಗಿ ಆಡಲಿಲ್ಲ. 18 ಎಸೆಗಳನ್ನು ಬಳಸಿಕೊಂಡು 18 ರನ್ ಬಾರಿಸಿ ಹೀನಾಯವಾಗಿ ಔಟ್ ಆದರು. ಗ್ಲೆನ್ ಮ್ಯಾಕ್ಸ್ವೆಲ್ ಮತ್ತೊಂದು ಬಾರಿ ವೈಫಲ್ಯ ಕಂಡು 3 ರನ್ಗೆ ಪೆವಿಲಿಯನ್ ಕಡೆಗೆ ನಡೆದರು. ಈ ವೇಳೆ ತಂಡಕ್ಕೆ ಆಸರೆಯಾದದ್ದು ವಿರಾಟ್ ಕೊಹ್ಲಿ. ಆರಂಭಿಕರಾಗಿ ಆಡಲು ಇಳಿದ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ನಿಧಾನಗತಿಯಲ್ಲಿ ಆಡಿದ ಅವರು 49 ಎಸೆತಕ್ಕೆ 77 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು.