ಮಂಡ್ಯ: ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆಗಾಗಿ ಗಂಡನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಪ್ರೇಮಕುಮಾರಿ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಎರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ರಾಘವೇಂದ್ರ ಎಂಬಾತನ ಜೊತೆಗೆ ಪ್ರೇಮಕುಮಾರಿ ಮದುವೆ ಮಾಡಿಕೊಟ್ಟಿದ್ದ ಪೋಷಕರು.
ಮದುವೆಯಲ್ಲೇ ವರದಕ್ಷಿಣೆಯಾಗಿ 5 ಲಕ್ಷ ನಗದು, 150 ಗ್ರಾಂ ಚಿನ್ನ ಪಡೆದಿದ್ದ ಆರೋಪಿ ರಾಘವೇಂದ್ರ. ಮದುವೆಯಾದ 6 ತಿಂಗಳು ಅನ್ಯೋನ್ಯವಾಗಿದ್ದ ದಂಪತಿಗಳು. ಅನಂತರ ಮತ್ತೆ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಪೀಡಿಸಿದ್ದ ಪತಿ ರಾಘವೇಂದ್ರ. ಮದುವೆಯಲ್ಲೆ 5ಲಕ್ಷ ವರದಕ್ಷಿಣೆ, ಚಿನ್ನ ಕೊಟ್ಟಿರುವುದಾಗಿ ತಿಳಿಹೇಳಿ ಮತ್ತೆ ವರದಕ್ಷಿಣೆಗೆ ನಿರಾಕರಿಸಿದ್ದ ಪ್ರೇಮಕುಮಾರಿ. ಇದೇ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಜಗಳ ಶುರುವಾಗಿ ಹಲವಾರು ಬಾರಿ ಠಾಣೆ ಮೆಟ್ಟಿಲೇರಿದ್ದ ಪ್ರಕರಣ. ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎಲ್ಎಲ್ಬಿ ಸೇರ್ಪಡೆ ಆಗಿದ್ದಳು.
ಆದಾಯ ತೆರಿಗೆದಾರರ ಗಮನಿಸಿ.. ಮಾ.31 ರೊಳಗೆ ಈ ಕೆಲಸ ಕಡ್ಡಾಯ.! ಇಲ್ಲಾಂದ್ರೆ ದಂಡ ಗ್ಯಾರಂಟಿ
ಆದರೆ ಪ್ರೇಮಾ ಓದುತ್ತಿದ್ದ ಕಾಲೇಜ್ ಬಳಿಯೂ ಬಂದು ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿ ಕೊಲೆ ಬೆದರಿಕೆಯೂ ಹಾಕಿದ್ದ ಪತಿ ರಾಘವೇಂದ್ರ. ದಿನೇದಿನೆ ಗಂಡನ ಕಿರುಕುಳದಿಂದ ಮನನೊಂದಿಗೆ ಪ್ರೇಮಾ. ಮಾ.20 ರಂದು ಸಂಜೆ ತವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಮುನ್ನ 5 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದು, ವರದಕ್ಷಿಣೆಗಾಗಿ ಗಂಡನ ಮನೆಯವರ ಕಿರುಕುಳ ಸಾವಿಗೆ ಕಾರಣವಾಗಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.