ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಮಾರಾಟ ಮಾಡಿಲ್ಲ ಎಂದು ಬಾಲಕಿಯ ಪಾಲಕರು ಹೇಳಿದ್ದಾರೆ.
ಬಾಲಕಿಯ ಪಾಲಕರು ನೀಡಿದ ಹೇಳಿಕೆಯಿಂದ ಸೋನು ಶ್ರೀನಿವಾಸ್ ಗೌಡ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ. ‘ನಾವು ಮಗುವನ್ನು ಮಾರಿಲ್ಲ’ ಎಂದು ಪಾಲಕರು ಹೇಳಿಕೆ ನೀಡಿದ್ದಾರೆ.
India Weather: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಸಾಧ್ಯತೆ!
ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸೋನು ಶ್ರೀನಿವಾಸ್ ಗೌಡ ಅವರು ಇತ್ತೀಚೆಗೆ ಅರೆಸ್ಟ್ ಆದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ಯಾವುದೇ ಕಾನೂನಿನ ನಿಯಮ ಪಾಲಿಸದೆ ಅವರು ದತ್ತು ತೆಗೆದುಕೊಂಡಿದ್ದರು ಎನ್ನಲಾಗಿದೆ. ಮೊದಲು ಪೊಲೀಸ್ ಕಸ್ಟಡಿಯಲ್ಲಿ ಇದ್ದ ಸೋನು, ಈಗ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಮಗು ದತ್ತು ಪಡೆದ ಬಗ್ಗೆ ಪೋಷಕರು ಹೇಳಿದ್ದಾರೆ.
ಇತ್ತೀಚೆಗೆ ಬಾಲಕಿಯ ಪೋಷಕರಿಗೆ ಪೊಲೀಸರು ಸಮನ್ಸ್ ನೀಡಿದ್ದರು. ಪೊಲೀಸರು ಎದುರು ಬಾಲಕಿಯ ಪಾಲಕರು ಹಾಜರಾಗಿದ್ದಾರೆ. ‘ಸೋನು ಗೌಡ ಅವರನ್ನು ಮಗು ಹಚ್ಚಿಕೊಂಡಿತ್ತು. ಅನಾರೋಗ್ಯ ಉಂಟಾದಾಗ ಸೋನು ಸೋನು ಅಂತಾ ಕನವರಿಸ್ತಿತ್ತು. ಒಂದೆರಡು ದಿನ ಸೋನು ಜೊತೆ ಇರಲಿ ಅಂತಾ ಕಳಿಸಿದ್ದೆವು. ನಾವು ಮಗುವನ್ನ ಸೋನುಗೆ ಮಾರಾಟ ಮಾಡಿಲ್ಲ’ ಎಂದು ಬ್ಯಾಡರಹಳ್ಳಿ ಪೊಲೀಸರ ಮುಂದೆ ಮಗು ಪಾಲಕರು ಹೇಳಿಕೆ ನೀಡಿದ್ದಾರೆ.