ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ.
ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣ ಬೆಂಗಳೂರಿನ ಸಿಜೆಎಂ ನ್ಯಾಯಾಲಯದಿಂದ ಅದೇಶ ಪ್ರಕಟ ಮಸ್ಕಿಯಲ್ಲಿ ಮಗು ವಾಸವಿದ್ದ ಸ್ಥಳ ಪರಿಶೀಲಿಸಿದ್ದ ಪೊಲೀಸರು ವಿಚಾರಣೆ ನಡೆಸಿ ಕೋರ್ಟಿಗೆ ಹಾಜರು ಪಡಿಸಿದ್ದ ಪೊಲೀಸರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿದೆ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ಯಾವೆಲ್ಲ ನಿಯಮ ಉಲ್ಲಂಘನೆ?
ನಿಯಮಗಳ ಪ್ರಕಾರ ಮಗುವನ್ನು (Child) ದತ್ತು ಪಡೆಯುವಾಗ ಅರ್ಜಿ ಸಲ್ಲಿಸಬೇಕು. ಆದರೆ ಸೋನುಗೌಡ ಅರ್ಜಿ ಸಲ್ಲಿಸಿರಲಿಲ್ಲ. ಮಗುವನ್ನು ಹೊರಗಡೆ ತೋರಿಸುವಂತಿಲ್ಲ ಮತ್ತು ಕುಟುಂಬದವರ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಆದರೆ ಲೈವ್ ಮಾಡುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಮಗುವನ್ನು ಸಾಕಿ ಸಲಹುವಷ್ಟು ಪೋಷಕರಲ್ಲಿ ಆರ್ಥಿಕ ಸಾಮರ್ಥ್ಯ ಇದ್ಯಾ ಎಂಬುದನ್ನು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಸೋನು ಶ್ರೀನಿವಾಸ್ ಗೌಡ ಮದುವೆ ಸಹ ಆಗಿಲ್ಲ. ದತ್ತು ಪಡೆಯುವವರು ಹಾಗು ಮಗುವಿನ ವಯಸ್ಸಿನ ಅಂತರ 25 ವರ್ಷ ಇರಬೇಕಾಗುತ್ತದೆ.
ವಿಡಿಯೋದಲ್ಲಿ ಮಗುವಿನ ಕುಟುಂಬದಿಂದ ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಮಗುವನ್ನು ಮಾರಾಟ ಮಾಡಿದ್ದಾರಾ ಎಂಬ ಪ್ರಶ್ನೆಯೂ ಇಲ್ಲಿ ಎದ್ದಿದೆ. ಮಗುವನ್ನು ಮಾರಾಟ ಮಾಡಲು ನಿಷೇಧ ಇರುವ ಕಾರಣ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956ರ ಪ್ರಕಾರ ದತ್ತು ಪಡೆಯುವ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದಕ್ಕೋಸರ ಮಕ್ಕಳ ರಕ್ಷಣಾ ಘಟಕ, ರಾಜ್ಯ ದತ್ತು ಪ್ರಾಧಿಕಾರ,
ಆಕೆ ನೆಲೆಸಿರುವ ಅರ್ಜಿ ವಿಳಾಸ ಎಲ್ಲಾ ಮಾಹಿತಿಗಳನ್ನು ಪಡೆದು ಎಲ್ಲಾ ನಿಯಮಗಳನ್ನು ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಮಕ್ಕಳನ್ನು ದತ್ತು ಪಡೆಯಬೇಕು. ಬಾಲ ನ್ಯಾಯ ಕಾಯಿದೆ 2000 ಕಲಂ 29ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಮಿತಿ ಆದೇಶದ ಪ್ರಕಾರವೇ ದತ್ತು ನೀಡಬೇಕು ಸದ್ಯ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಠಿಣ ಸೆಕ್ಷನ್ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದರಿಂದ ಬಹುತೇಕ ಜೈಲುಪಾಲಾಗುವುದು ಖಚಿತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.