ಬೆಂಗಳೂರು: ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ. ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಹೋಳಿ ಹಬ್ಬ. ಪುರಾಣದ ಕಾಲದಿಂದಲೂ ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಮಾನವೀಯತೆಯ ಭಾವನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕತೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುವುದು.
ಹಿಂದೂ ಧರ್ಮದ ಪ್ರಕಾರ, ಗ್ರಹಣದ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡಿ ನಂತರ, ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ, ಹೋಳಿ ದಿನ ದಾನ ಮಾಡುವಾಗ ಕೆಲವು ವಸ್ತುಗಳನ್ನು ತಪ್ಪಿಸಬೇಕಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ವಾಸ್ತವವಾಗಿ, ಬಟ್ಟೆಗಳನ್ನು ದಾನ ಮಾಡಲು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ, ಹೋಳಿ ದಿನದಂದು ಬಟ್ಟೆಗಳನ್ನು ದಾನ ಮಾಡುವುದನ್ನು ನಿಷೇಧಿಸಲಾಗಿದೆ.
ಹೋಳಿ ಹಬ್ಬದ ದಿನ ಹಣವನ್ನು ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ಈ ದಿನ ಹಣವನ್ನು ದಾನ ಮಾಡುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಕುಂಠಿತವಾಗುತ್ತದೆ. ಅಲ್ಲದೆ, ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬಹುದು. ಹಾಗೆ ಚಿನ್ನವನ್ನೂ ಕೂಡ ದಾನ ಮಾಡಬಾರದು
ಹೋಳಿ ದಿನದಂದು ಗಾಜಿನ ವಸ್ತುಗಳನ್ನು ಮತ್ತೊಬ್ಬರಿಗೆ ದಾನವಾಗಿ ನೀಡಬಾರದು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು
ವಿವಾಹಿತ ಮಹಿಳೆಯರು ತಮ್ಮ ಮೇಕಪ್ ವಸ್ತುಗಳನ್ನು ದಾನ ಮಾಡಬಾರದು ಎಂದು ನಂಬಲಾಗಿದೆ. ಇದು ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಹೋಳಿ ಹಬ್ಬದ ದಿನ ಸಾಸಿವೆ ಎಣ್ಣೆಯನ್ನು ದಾನದ ರೂಪದಲ್ಲಿ ಕೊಡಬೇಡಿ. ಏಕೆಂದರೆ ಇದರಿಂದ ಶನಿ ದೇವನ ಕೋಪಕ್ಕೆ ಗುರಿಯಾಗುತ್ತೀರಿ