ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ನಾವು ಅನ್ನದಿಂದ ಹಿಡಿದು, ವಿವಿಧ ರೀತಿಯ ತಿಂಡಿ, ತರಕಾರಿ, ಹಣ್ಣು ಹಂಪಲುಗಳನ್ನು ಫ್ರಿಡ್ಜ್ನಲ್ಲಿ ಇಟ್ಟು ಸೇವಿಸುತ್ಟೇವೆ,
ಇನ್ನೂ ಬೇಯಿಸಿದ ಚಿಕನ್ ಆಗಿರಲಿ, ಹಸಿ ಚಿಕನ್ ಆಗಿರಲಿ ಹೆಚ್ಚು ಹೊತ್ತು ಹಾಳಾಗದೇ ಇರುವಂತೆ ಕಾಪಾಡುವುದು ದೊಡ್ಡ ಸವಾಲಿನ ಕೆಲಸ. ಸಾಮಾನ್ಯವಾಗಿ ಕೋಳಿ ಮಾಂಸ ತಂದ ತಕ್ಷಣ ಕೆಲವರು ಅಡುಗೆ ಮಾಡುತ್ತಾರೆ. ಮತ್ತೆ ಕೆಲವರು ಒಂದಷ್ಟು ಬಳಸಿ, ಇನ್ನೂ ಒಂದಷ್ಟನ್ನು ಫ್ರಿಜ್ನಲ್ಲಿ ಇಡುತ್ತಾರೆ. ಆದರೆ ಅಡುಗೆ ಮಾಡಿದ ಮಾಂಸವೇ ಆಗಿರಲಿ, ಹಸಿ ಚಿಕನ್ ಆಗಿರಲಿ ಅದನ್ನು ಫ್ರಿಜ್ನಲ್ಲಿಟ್ಟು ಇದ್ದಕ್ಕಿದ್ದಂತೆ ಬಾಗಿಲು ತೆರೆದಾಗ ಅದರಿಂದ ಕೆಲವೊಮ್ಮೆ ಬಲವಾದ ವಾಸನೆ ಬರುತ್ತದೆ. ಈ ರೀತಿ ವಾಸನೆಯು ನೀವು ಶೈತ್ಯೀಕರಿಸಿದ ಮಾಂಸವು ಕೊಳೆತು ಹೋಗಿದೆ ಎಂಬುವುದನ್ನು ಸೂಚಿಸುತ್ತದೆ.
ಕೋಳಿ ಬೇಗ ಹಾಳಾಗುವುದನ್ನು ತಡೆಯಲು ಅದನ್ನು ಸರಿಯಾಗಿ ಸಂಗ್ರಹಿಸುವುದು ಮುಖ್ಯ. ನೀವು ಕೋಳಿಯ ಗುಣಮಟ್ಟ, ಸರಿಯಾದ ಶೇಖರಣಾ ವಿಧಾನ, ಫ್ರಿಜ್ ತಾಪಮಾನ ಇತ್ಯಾದಿಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಕೋಳಿ ಮಾಂಸ ಹಾಳಾಗುತ್ತದೆ. ಸದ್ಯ ನಾವಿಂದು ಫ್ರಿಜ್ನಲ್ಲಿ ಹೆಚ್ಚು ಸಮಯದವರೆಗೂ ಚಿಕನ್ ಅನ್ನು ಫ್ರೆಶ್ ಆಗಿ ಇಡುವುದು ಹೇಗೆ ಎಂಬುವುದನ್ನು ತಿಳಿಸುತ್ತೇವೆ.
ಫ್ರಿಜ್ನಲ್ಲಿ ಕಚ್ಚಾ ಕೋಳಿ ಮಾಂಸವನ್ನು ಸಂಗ್ರಹಿಸುವ ಮುನ್ನ ಅದರ ಸಡಿಲವಾದ ಭಾಗಗಳನ್ನು ತೆಗೆದುಹಾಕಿ ಪ್ರತ್ಯೇಕಿಸಿ. ನಂತರ ಚಿಕನ್ ಅನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ. ಬಳಿಕ ತಣ್ಣೀರಿಗೆ ಹಾಕಿ. ಇದೆಲ್ಲಾ ಮಾಡಿದ ನಂತರ ಚಿಕನ್ ಅನ್ನು ಕ್ಲೀನ್ ಮಾಡಿ ಒಣಗಿಸಿ ಫ್ರಿಜ್ನಲ್ಲಿಡಿ.
ನೀವು ಹಸಿ ಚಿಕನ್ ಅನ್ನು ಹೆಚ್ಚು ಹೊತ್ತು ತಾಜಾವಾಗಿಡಲು ಬಯಸಿದರೆ, ಅದನ್ನು ಅರಿಶಿನ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಿ. ನಂತರ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಫ್ರಿಜ್ನಲ್ಲಿಡಿ. ಅರಿಶಿನವು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
ಚಿಕನ್ ಅನ್ನು ತೊಳೆಯಲು ಅಥವಾ ಸ್ವಚ್ಛಗೊಳಿಸಲು ನಿಮಗೆ ಆಲಸ್ಯವಾಗಿದ್ದರೆ, ಅದನ್ನು ನೀವು ಗಾಳಿಯಾಡದ ಜಿಪ್ ಪೌಚ್ನಲ್ಲಿ ಸಂಗ್ರಹಿಸಿ ಫ್ರಿಜ್ನಲ್ಲಿ ಇಡಬಹುದು.
ಬೇಯಿಸಿದ ಚಿಕನ್ ಅನ್ನು ಫ್ರಿಜ್ನಲ್ಲಿ 3-4 ದಿನಗಳವರೆಗೆ ಸಂಗ್ರಹಿಸಬಹುದು. ಅಂದರೆ ಬೇಯಿಸಿದ ಚಿಕನ್ ಗ್ರೇವಿ, ಚಿಕನ್ ಸಾಂಬಾರ್, ಹುರಿದ ಚಿಕನ್, ಗ್ರಿಲ್ಡ್ ಚಿಕನ್, ಸ್ಟೀಮ್ಡ್ ಚಿಕನ್ ಇತ್ಯಾದಿಗಳು.
ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು.