ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬೆಂಗಳೂರಿಗರು ಬೆಚ್ಚಿ ಬೀಳುವಂತೆ ಮಾಡಿತ್ತು. ಬಾಂಬರ್ ನನ್ನು ಹಿಡಿಯೋಕ್ಕೆ ಬೆಂಗಳೂರು ಪೊಲೀಸರು ಹಾಘು ಎನ್ ಐ ಎ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಡ್ತಿದ್ದಾರೆ.. ಶಂಕಿತ ಉಗ್ರನ ಸಿಸಿಟಿವಿ ಫುಟೇಜ್ ಇದ್ರೂ ಬಾಂಬರ್ ನನ್ನು ಹಿಡಿಯುವುದು ಪೊಲೀಸ್ ಹಾಗು ಎನ್ ಐ ಎ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಸತತ ಪ್ರಯತ್ನದ ನಂತರ ಎನ್ ಐ ಎ ತಂಡ ಇದೀಗ ಶಂಕಿತ ಗುರುತು ಪತ್ತೆ ಹಚ್ಚಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಇದೀಗ ಎನ್ ಐ ಎ ಅಧಿಕಾರಿಗಳು ಮೇಜರ್ ಟ್ವಿಸ್ಟ್ ನೀಡಿದ್ದಾರೆ..ಶಂಕಿತನ ಜಾಡು ಹಿಡಿದು ಹೊರಡ ಎನ್ಐಎಗೆ ಶಂಕಿತರುಗೆ ಚೆನೈ ಲಿಂಕ್ ಇರೋದು ಗೊತ್ತಾಗಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವರು ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಬಾಂಬ್ ಇಟ್ಟು ಟೈಂ ಸೆಟ್ ಮಾಡಿ ಪರಾರಿಯಾಗಿರೋದು ಎನ್ನಲಾಗುತ್ತಿದೆ. ಇನ್ನು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನು ಒಬ್ಬ ವ್ಯೆಕ್ತಿಯಲ್ಲಿ .ಇಬ್ಬರು ಶಂಕಿತರು ಈ ಕೃತ್ಯ ಮಾಡಿರುವುದು ಎಂದು ಎನ್ಐಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
ಬಾಂಬ್ ಇರಿಸಿದ್ದ ಶಂಕಿತನಿಗೆ ಭಯೋತ್ಪಾದನಾ ಸಂಘಟನೆ ಜೊತೆ ಒಡನಾಟವಿಟ್ಟುಕೊಂಡು ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ಬಾಂಬ್ ಇರಿಸಿರುವ ಅನುಮಾನ ದಟ್ಟವಾಗಿದೆ. ಆದರೆ, ಈತ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಬಹುಮಾನ ಸಹ ಘೋಷಿಸಲಾಗಿದೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.
‘ಮುಸಾವೀರ್ಗೆ ತೀರ್ಥಹಳ್ಳಿಯವನಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹ ಸಹಕಾರ ನೀಡಿರುವ ಮಾಹಿತಿ ಲಭ್ಯವಾಗಿದೆಯಂತೆ. ಇವರಿಬ್ಬರೂ ತಲೆಮರೆಸಿಕೊಂಡಿರು ವುದರಿಂದ, ಅವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ. ಸದ್ಯ ಜೈಲಿನಲ್ಲಿರುವ ಮಾಝ್ ಮುನೀರ್ ಅಹ್ಮದ್ ಹಾಗೂ ಇತರರ ಜೊತೆಗೆಯೂ ಮುಸಾವೀರ್ ಒಡನಾಟವಿಟ್ಟುಕೊಂಡಿದ್ದ ಎನ್ನುತ್ತಿವೆ ಪೊಲೀಸ್ ಮೂಲಗಳು. ಶಂಕಿತರು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನ ೨ ತಿಂಗಳು ತಮಿಳುನಾಡಿನ ಲಾಡ್ಜ್ನಲ್ಲಿ ಉಳಿದಿದ್ದ ಬಗ್ಗೆ ಎನ್ಐಎಗೆ ಮಾಹಿತಿ ಕಲೆ ಹಾಕಿದೆ.
ಮತ್ತಷ್ಟು ಆಳದ ತನಿಖೆ ನಡೆಸುತ್ತಿರೋ ಎನ್ಐಎ ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದೆ. ಆರೋಪಿಯ ಟೋಪಿಯು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಲಾಗಿದೆ. ಟೋಪಿ ಖರೀದಿ ವೇಳೆ ವ್ಯಕ್ತಿಯ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಪತ್ತೆಯಾದ ಕ್ಯಾಪ್ನಲ್ಲಿ ಶಂಕಿತನ ಕೂದಲು ಸಿಕ್ಕಿದ್ದು ಅದನ್ನು ಡಿಎನ್ಎ ಟೆಸ್ಟ್ ಸಹ ಒಳಪಡಿಸಿದ್ದು ತನಿಖೆಯ ರಿಪೋರ್ಟ್ ಪ್ರಕಾರ ಇದೇ ವ್ಯಕ್ತಿಗಳಿಗೆ ಮ್ಯಾಚ್ ಆಗುತ್ತಿದೆ ಎನ್ನಲಾಗಿದೆ.
ಮಾಡೆಲ್ ಕ್ರೈಂ ಮಾಡಿ ಎಸ್ಕೇಪ್ ಆಗಿರುವ ರೀತಿ ಗಮನಿಸಿದಾಗ, ಇದೇ ರೀತಿ ಅಪರಾಧ ಎಸಗಿ ನಾಪತ್ತೆಯಾಗಿರುವ ಉಳಿದ ವ್ಯಕ್ತಿಗಳ ಕುರಿತ ಮಾಹಿತಿ ಅನುಸರಿಸಿದಾಗ, ಈತ ಇಸ್ಲಾಮಿಕ್ ಸ್ಟೇಟ್ ಆಫ್ ಕೋರಾಸಾನ್ನ ಕಾರ್ಯಕರ್ತ ಎಂಬ ಎನ್ಐಎ ಶಂಕೆ ದೃಢವಾಗಿದೆ. ಬಾಂಬರ್ ಉಗ್ರನ ಹಲವು ನಡವಳಿಕೆಗಳನ್ನು ವಿಶ್ಲೇಷಿಸಿ ಎನ್ಐಎ ಈ ನಿರ್ಧಾರಕ್ಕೆ ಬಂದಿದೆ.
ಶಂಕೆಯ ಆಧಾರದಲ್ಲಿ ಚೆನ್ನೈ ನಗರದ ದೇವಸ್ಥಾನದ ಬಳಿಯ ಐದು ಜನರನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರ ಮಾಹಿತಿಯನ್ವಯ, ಇಸ್ಲಾಮಿಕ್ ಸ್ಟೇಟ್ ನಿಷೇಧಿತ ಸಂಘಟನೆಗಾಗಿ ಬಾಂಬರ್ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆಯಂತೆ . ಸದ್ಯಕ್ಕೆ ಸಿಸಿಬಿ ಹಾಗು ಎನ್ ಐ ಎ ಅಧಿಕಾರಿಗಳು ಜಂಟಿಯಾಗಿ ಶಂಕಿತರ ಪತ್ತೆಗೆ ಬಲೆ ಬೀಸಿದ್ದು ಬಾಂಬರ್ ನನ್ನು ಹಿಡಿಯಲು ಶತ ಪ್ರಯತ್ನ ಮಾಡುತ್ತಿದ್ದಾರೆ.