ಇಂಡಿಯನ್ ಪ್ರೀಮಿಯರ್ ಲೀಗ್ ನ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಐಪಿಎಲ್ 2024 ಪಾಯಿಂಟ್ಸ್ ಟೇಬಲ್ ಇಲ್ಲಿದೆ ನೋಡಿ
ಟೂರ್ನಿ ಆರಂಭವಾಗಿ ಎರಡು ದಿನಗಳು ಕಳಿದಿದ್ದು, ಈವರೆಗೆ ಒಟ್ಟು ಮೂರು ಪಂದ್ಯಗಳು ನಡೆದಿವೆ. ಶನಿವಾರ ಮೊದಲ ಡಬಲ್ ಹೆಡ್ಡರ್ ಆಯೋಜಿಸಲಾಗಿತ್ತು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೆ, ನಂತರದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಜಯ ಕಂಡಿತು.
ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು +0.779 ರನ್ರೇಟ್ ಹೊಂದಿದೆ.
ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.455 ಆಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.200 ಆಗಿದೆ.
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಎಂಟನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.200 ಆಗಿದೆ.
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಒಂಬತ್ತನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.455 ಆಗಿದೆ.
ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಕೊನೆಯ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.779 ಆಗಿದೆ
ಉಳಿದ ತಂಡಗಳಾದ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಲಖನೌ ಸೂಪರ್ ಜೇಂಟ್ಸ್ ಈವರೆಗೆ ಪಂದ್ಯವನ್ನು ಆಡಿಲ್ಲ