ಅಥಣಿ : ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ನಾಲೈದು ಅಂಗಡಿಗಳಲ್ಲಿ ರಾತ್ರಿ ವೇಳೆ ಕಳ್ಳನೊಬ್ಬ ಕಳ್ಳತನದ ಕಲೆ ಪ್ರದರ್ಶಿಸಿ ಲಕ್ಷಾಂತರ ರೂಪಾಯಿ ದೋಚಿರುವ ಪ್ರಸಂಗ ಜರುಗಿದೆ.
ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡ ಬ್ರಹ್ಮಾ ಎಂಟರ್ ಪೈಸಸ್, ಪಕ್ಕದ ಆಟೋ ಮೊಬೈಲ್ ಅಂಗಡಿ, ಕಿರಾಣಿ ಅಂಗಡಿ ಸೇರಿ ಇತರೆಡೆ ಅಂಗಡಿಗಳ ಪತ್ರಾಸು ಮುರಿದು ಒಳ ಪ್ರವೇಶಿಸಿ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತು ಅಂಗಡಿಕಾರರು ಅಥಣಿ ಪೊಲೀಸರ ಗಮನಕ್ಕೆ ತಂದರೂ ಕೂಡ ಪೊಲೀಸ್ ಇಲಾಖೆಯವರು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಓರ್ವ ಅಂಗಡಿಕಾರ ಅಸಮಾಧಾನ ಹೊರಹಾಕಿದ್ದಾನೆ. ಕೂಡಲೇ ಪೊಲೀಸರು ಕಳ್ಳನನ್ನ ಪತ್ತೆ ಹಚ್ಚಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.