ನೆಲಮಂಗಲ:- ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಾಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೊಂದು ಪೂಲೀಸ್ ಬಲೆಗೆ ಸಿಕ್ಕಿ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿರುವ ಅಕ್ರಮವಾದ ಗೋಡಾನ್ ನಲ್ಲಿ ಈ ಅಡ್ಡೆ ನಡೆಯುತ್ತಿತ್ತು. ಪೊಲೀಸ್ ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸೆರ್ವಿಸ್ ಜಂಟಿ ಕಾರ್ಯಚರಣೆ ನಡೆಸಿದಾಗ ಅಕ್ರಮ ಜಾಲ ಕಂಡು ಶಾಕ್ ಆಗಿದೆ.
ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನ ನಕಲು ಮಾಡುತ್ತಿದ್ದ ಗೋಡಾನ್ ಮೇಲೆ ದಾಳಿ ನಡೆಸಿ ಮಹೇಶ್ ಗಾಂಧಿ, ಅಶ್ವಿನ್, ನಿರ್ಮಲ್ ಎಂಬ ಮೊವರನ್ನ ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಬಳಿಯ ಅವಲಹಳ್ಳಿಯ ತಯಾರಕ ಘಟಕದಿಂದ ಲೋಡ್ಗಟ್ಟಲೇ ನಕಲಿ ಡಿಟರ್ಜೆಂಟ್ ಕೆಮಿಕಲ್ ಖರೀದಿ ಮಾಡಿ ಬ್ರಾಂಡೆಡ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡುತ್ತಿದ್ದರು
ಮುಂದೆ, ನಕಲಿಯಾಗಿ ಪ್ರಿಂಟ್ ಮಾಡಿದ ಬ್ರಾಂಡೆಡ್ ಲೇಬಲ್ ಬಳಸಿ ಡಿಟರ್ಜೆಂಟ್ ಬಾಟಲ್ ಗಳಲ್ಲಿ ತುಂಬಿ ನಕಲಿ ಬ್ರಾಂಡ್ಗಳನ್ನು ಅಸಲಿ ಬ್ರಾಂಡ್ ಆಗಿ ಕನ್ವರ್ಟ್ ಮಾಡಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಾರಾಟ ಮಾಡಿ ಕೋಟ್ಯಾಂತರ ಹಣ ಗಳಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಇನ್ನು ದಾಳಿಯ ವೇಳೆ ಹದಿನೈದು, ಇಪ್ಪತ್ತು ಲಕ್ಷ ರೂಪಾಯಿ ಬೆಲೆಬಾಳುವ ಡಿಟರ್ಜೆಂಟ್ ಗಳ ನೂರಾರು ಬಾಕ್ಸ್, ಲೇಬಲ್, ಖಾಲಿ ಬಾಟಲ್, ಗುಡ್ ನೈಟ್ ಗಳನ್ನ ಸೀಜ್ ಮಾಡಿಕೊಳ್ಳಲಾಗಿದೆ