ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಚಿಯರ್ಅಪ್ ಮಾಡಲು ಅನುಷ್ಕಾ ಶರ್ಮಾ ಸ್ಟೇಡಿಯಂ ಗೆ ಬರುವ ಸುದ್ದಿ ಬಗ್ಗೆ ವರದಿ ಆಗಿದೆ.
ಇತ್ತೀಚೆಗೆ ಅನುಷ್ಕಾ ಶರ್ಮಾ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಮಗು ಜನಿಸುವುದಕ್ಕೂ ಮೊದಲೇ ಅನುಷ್ಕಾ ಹಾಗೂ ಅವರ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಲಂಡನ್ಗೆ ತೆರಳಿದ್ದರು. ಅಲ್ಲಿಯೇ ಅವರು ಮಗುವಿಗೆ ಜನ್ಮ ನೀಡಿದ್ದರು. ಐಪಿಎಲ್ ಕಾರಣಕ್ಕೆ ವಿರಾಟ್ ಅವರು ಭಾರತಕ್ಕೆ ಮರಳಿದ್ದಾರೆ. ಅನುಷ್ಕಾ ಶರ್ಮಾ ಇನ್ನೂ ವಿದೇಶದಲ್ಲೇ ಇದ್ದಾರೆ. ಅವರು ಶೀಘ್ರವೇ ಭಾರತಕ್ಕೆ ಮರಳಲಿದ್ದಾರೆ. ಅಷ್ಟೇ ಅಲ್ಲ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಚಿಯರ್ಅಪ್ ಮಾಡಲು ಸ್ಟೇಡಿಯಂಗೂ ಬರಲಿದ್ದಾರೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಮದುವೆ ಆಗಿ ಆರು ವರ್ಷಗಳು ಕಳೆಯುತ್ತಾ ಬಂದಿದೆ. ಈ ಅವಧಿಯಲ್ಲಿ ಅನೇಕ ಬಾರಿ ಪತಿಗೆ ಚಿಯರ್ಅಪ್ ಮಾಡಲು ಸ್ಟೇಡಿಯಂಗೆ ಅವರು ಬಂದಿದ್ದು ಇದೆ. ಮತ್ತೊಂದು ವಿಶೇಷ ಎಂದರೆ ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ, ಆರ್ಸಿಬಿ ಎಂದರೆ ಅವರಿಗೆ ವಿಶೇಷ ಪ್ರೀತಿ. ಹೀಗಾಗಿ, ಆರ್ಸಿಬಿ ಮ್ಯಾಚ್ ಆದಾಗಲೆಲ್ಲ ಅವರು ಬಂದಿದ್ದೂ ಇದೆ. ಈ ಬಾರಿ ಅವರು ಸ್ಟೇಡಿಯಂಗೆ ಬರುವುದಿಲ್ಲ ಎಂದು ವರದಿ ಆಗಿತ್ತು. ಆದರೆ, ಇದು ಸುಳ್ಳು ಎನ್ನಲಾಗಿದೆ.
ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಬಗ್ಗೆ ವಿಶೇಷ ಪ್ರೀತಿ ಇದೆ. ಸದ್ಯ ಮಗು ಜನಿಸಿ ಹೆಚ್ಚು ಸಮಯ ಕಳೆದಿಲ್ಲ. ಈ ಸಂದರ್ಭದಲ್ಲಿ ಮಗ ಅಕಾಯ್ ಜೊತೆ ಟ್ರಾವೆಲ್ ಮಾಡೋದು ನಿಜಕ್ಕೂ ರಿಸ್ಕ್. ಈ ಕಾರಣದಿಂದ ಅನುಷ್ಕಾ ಅವರು ಲಂಡನ್ನಲ್ಲಿಯೇ ಇದ್ದಾರೆ. ಮಗಳು ವಮಿಕಾ ಕೂಡ ಅನುಷ್ಕಾ ಜೊತೆ ಇದ್ದಾಳೆ. ಅವರು ಭಾರತಕ್ಕೆ ಬರೋದನ್ನು ಫ್ಯಾನ್ಸ್ ಕಾಯುತ್ತಿದ್ದಾರೆ
ಅನುಷ್ಕಾ ಶರ್ಮಾ ಅವರು ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. 2018ರ ‘ಜೀರೋ’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಚಿತ್ರರಂಗದಿಂದ ದೂರ ಇದ್ದು ಸುಮಾರು ಆರು ವರ್ಷಗಳು ಕಳೆದಿವೆ. ಸದ್ಯಕ್ಕಂತೂ ಅವರು ನಟನೆಗೆ ಮರಳೋದು ಅನುಮಾನ ಎನ್ನಲಾಗುತ್ತಿದೆ