ಬೆಂಗಳೂರು: ಚುನಾವಣಾ ಸಮಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಒಬ್ಬೊಬ್ಬ ಶಾಸಕನಿಗೂ ಬಿಜೆಪಿಯವರು 50 ಕೋಟಿ ಆಫರ್ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು (BJP) ಭ್ರಷ್ಟಾಚಾರದ ಪಿತಾಮಹರು.
ಆಪರೇಷನ್ ಕಮಲ ಶುರುಮಾಡಿದವರು. ಒಬ್ಬೊಬ್ಬ ಎಂಎಲ್ಎಗೆ 50 ಕೋಟಿ ಆಫರ್ ಮಾಡ್ತಾರೆ. ನಾವೇ ಎಲೆಕ್ಷನ್ ಮಾಡಿಕೊಳ್ಳುತ್ತೇವೆ ಬನ್ನಿ ಅಂತಾರೆ. ಯಾವ ಹಣ ಇದು, ಬ್ಲಾಕ್ ಮನಿ ಅಲ್ವ ಇದು ಎಂದು ಸಿಎಂ ಪ್ರಶ್ನಿಸಿದರು. ರಾಜಕೀಯ ಪಕ್ಷಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ,
ರಾತ್ರಿ ಅನ್ನ ಉಳಿದರೆ ಅದನ್ನು ಬಿಸಾಡಬೇಡಿ! ಅದರ ಸೇವನೆಯಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತಿರಾ.!
ಜನಾಭಿಪ್ರಾಯ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಹೇಗೆ…?, ಬಿಜೆಪಿಯವ್ರಿಗೆ ಸೋಲಿನ ಭೀತಿ ಶುರುವಾಗಿದೆ, ಭೀತಿಯಿಂದ ರಾಜಕೀಯ ಪಕ್ಷಗಳ ನಿಷ್ಕ್ರೀಯಗೊಳಿಸುವ ಕೆಲಸ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ, ಅವರ ಖಾತೆಯನ್ನೂ ಸೀಜ್ ಮಾಡಬೇಕಲ್ವ. ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೇ ಇದ್ದಾರಾ, ಬಿಜೆಪಿಯಲ್ಲಿ ಯಾರೂ ಇಲ್ವ ಎಂದು ಮರುಪ್ರಶ್ನೆ ಹಾಕಿದರು.