ರೈತ ಅರಿಶಿನ ಬಿತ್ತನೆ ಖರೀದಿಸಿ, ಅದನ್ನು ನಾಟಿ ಮಾಡಿಸಿ, ನಂತರ ಉಪಚಾರ ಮಾಡಿ, ಕಟಾವು ಮಾಡುವುದು, ಬೇಯಿಸುವುದು, ಪಾಲಿಶ್ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸುವವರೆಗೆ ಆಗುವ ವೆಚ್ಚ ಕ್ವಿಂಟಾಲ್ವೊಂದಕ್ಕೆ 6 ಸಾವಿರ ರೂ. ಇದೀಗ ಅರಿಶಿನಕ್ಕೆ ಧಾರಣೆಯೇ ಕ್ವಿಂಟಾಲ್ಗೆ 5500ರಿಂದ 5800 ರೂ. ಮಾತ್ರ. ಇದಕ್ಕೆ ಕಾರಣ ಹೊರ ದೇಶಗಳಿಗೆ ಅರಿಶಿನ ರಫ್ತಾಗುತ್ತಿಲ್ಲ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ರಫ್ತು ಇನ್ನು ಆರಂಭಗೊಂಡಿಲ್ಲ. ಹೀಗಾಗಿ ಧಾರಣೆ ಮೇಲಕ್ಕೇರುತ್ತಿಲ್ಲ ಎನ್ನುತ್ತಾರೆ ಖರೀದಿದಾರರು.
ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರಿಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್ಗೆ ಬರೋಬ್ಬರಿ 41,101 ರೂಪಾಯಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಮೂರು ಎಕರೆ ಅರಿಶಿಣ ಬೆಳೆದ ರೈತ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರಿಶಿನ ಇಳುವರಿ ಬಂದಿದ್ದು ಶ್ರಮಕ್ಕೆ ವರದಾನವಾಗಿದೆ.
ರೈತನು ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಸಮರ್ಪಕ ನೀರು ಔಷಧೋಪಚಾರದೊಂದಿಗೆ ಉತ್ತಮ ಇಳುವರಿಗೆ ಕಂಡಿದ್ದಾರೆ. ಈಗಾಗಲೇ 18 ಕ್ವಿಂಟಲ್ ಅರಿಶಿನ ಮಾರಾಟವಾಗಿದ್ದು 7ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ. ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಇವರು ಮೂರು ಎಕ್ಕರೆ ಅರಿಶಿನದಿಂದ ಅಂದಾಜು 30 ಲಕ್ಷ ಆದಾಯದ ನಿರೀಕ್ಷೆಯ ಗುರಿ ಇಟ್ಟುಕೊಂಡಿದ್ದಾರೆ.