ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ. ಬಿಸಿಗಾಳಿಯಿಂದ ದೇಹವನ್ನು ತಂಪಾಗಿಡಲು ಪರದಾಡುತ್ತಿದ್ದಾರೆ. ಸುಲಭವಾಗಿ ನಿಂಬೆ ಹಣ್ಣಿನ ಪಾನಕ, ಜ್ಯೂಸ್ಗಳಿಂದ ದೇಹವನ್ನು ತಂಪಾಗಿ ಮಾಡಿಕೊಳ್ಳಬಹುದು, ಇದರಿಂದ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಬಿಸಿಗಾಳಿ ಹಾಗೂ ಉಷ್ಣದಿಂದ ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳು ತುಂಬಾ ಹುಷಾರ್ ಆಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ನಿಂಬೆ ಹಣ್ಣಿನ ಜ್ಯೂಸ್ಗಳನ್ನೆ ಕೇಳುತ್ತಿದ್ದಾರೆ. ಆದ್ರೆ, ಒಂದು ನಿಂಬೆ ಹಣ್ಣಿನ ಬೆಲೆ 7 ರಿಂದ 8 ರೂಪಾಯಿ ಇದೆ. ಈ ಹಿನ್ನಲೆ ಜ್ಯೂಸ್ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ನಿಂಬೆ ಹಣ್ಣಿಗಂತೂ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳು ಆ್ಯಪಲ್ ಬೆಲೆಯನ್ನೆ ಮಿರಿಸಿದೆ.
ಇನ್ನು ಯುಗಾದಿ, ರಾಮನವಮಿ ವೇಳೆಗೆ ನಿಂಬೆ ಹಣ್ಣು ಖರೀದಿ ಮತ್ತಷ್ಟು ದುಬಾರಿಯಾಗಲಿದ್ದು, ಬೇಸಿಗೆಯ ಬಯಲು ಪ್ರದೇಶಗಳಾದ ಆಂಧ್ರ, ತಮಿಳುನಾಡಿನಲ್ಲಿಯೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಇದೆಲ್ಲದರ ಆಚೆಗೆ ನೋಡುವುದಾದರೆ ತಮಿಳುನಾಡಿನ ಗ್ರಾಮವೊಂದರಲ್ಲಿ ಒಂದು ನಿಂಬೆಹಣ್ಣಿನ ಬೆಲೆ 35 ಸಾವಿರ ರೂಪಾಯಿ ಇದೆ.