ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರಿ ನಿಯಮಗಳ ಪಾಲನೆಗಾಗಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಥರ್ಡ ಐ ಕೆಮರಾಗಳನ್ನು ಅಳವಡಿಸಿದ್ದಾರೆ.
ಆ ಮೂಲಕ ಹೆಲ್ಮೆಟ್ ಧರಿಸದ, ಸೀಟ್ ಬೆಲ್ಟ್ ಧರಿಸದ ಜೊತೆಗೆ ಸಂಚಾರಿ ನಿಯಮ ಪಾಲನೆ ಮಾಡದ ವಾಹನ ಸವಾರರ ಮೇಲೆ ನಿಗಾ ವಹಿಸಿ ಅವರಿಗೆ ದಂಡ ಹಾಕೋ ಕಾರ್ಯ ಮಾಡಲಾಗ್ತಿದೆ.
ಆದ್ರೆ ಕೆಲ ವಾಹನ ಸವಾರರು ಪೊಲೀಸ್ ಥರ್ಡ ಐ ಕೆಮರಾಗಳಿಗೇನೆ ಚಳ್ಳೇ ಹಣ್ಣು ತಿನಿಸೋಕೆ ಹೊರಟಿದ್ರು. ತಮ್ಮ ವಾಹನಗಳ ನಂಬರ್ ಪ್ಲೇಟ್ ಗಳಿಗೆ ಸ್ಟಿಕರ್ ಹಚ್ಚಿ, ಮಧ್ಯದ ನಂಬರನ್ನ ಕಾಣದಂತೆ ಮಾಡಿ ಜೊತೆಗೆ ಅರ್ಧ ನಂಬರ್ ಪ್ಲೇಟ್ ಮುರಿದುಕೊಂಡು ಕೆಮರಾಗಳಿಗೆ ಕಾಣದಂತೆ ಓಡಾಡಿಕೊಂಡಿದ್ರು. ಇದನ್ನೆಲ್ಲಾ ಗಮನಿಸಿ ಅಂತಹ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಇಂದು ಗದಗ ಜಿಲ್ಲಾ ಪೊಲೀಸ್ರು ಸಜ್ಜಾಗಿದ್ರು ಆಮೂಲಕ ಪ್ರತಿ ಸರ್ಕಲ್ ಗಳಲ್ಲಿ ಸ್ಪೆಶಲ್ ಡ್ರೈವ್ ಮಾಡೋ ಮೂಲಕ ಅಂತಹ ನೂರಾರು ವಾಹನಗಳನ್ನು ಸೀಜ್ ಮಾಡಿದ್ದಾರೆ.
ಜೊತೆಗೆ ಅಂತಹ ವಾಹನಗಳನ್ನು ಗದಗ ಪೊಲೀಸ್ ಭವನದ ಆವರಣದಲ್ಲಿ ಸಾಲಾಗಿ ನಿಲ್ಲಿಸಿ ದಂಡ ಹಾಕೋ ಕಾರ್ಯ ಮಾಡಿದ್ರು ಜೊತೆಗೆ ಕೆಲ ನಕಲಿ ನಂಬರ್ ಹಾಕಿಕೊಂಡು ಓಡಾಡೋ ವಾಹನ ಸವಾರರಿಗೆ ನೋಟೀಸ್ ಕೊಟ್ಟು ಕ್ರಮ ಜರುಗಿಸಿದ್ದಾರೆ. ಆ ಮೂಲಕ ಢಿಫೆಕ್ಟಿವ್ ನಂಬರ್ ಮಾಡಿಕೊಂಡು ಓಡಾಡೋ ವಾಹನ ಸವಾರರಿಗೆ ಬಿಸಿ ಮುಟ್ಟೋ ಕಾರ್ಯ ಮಾಡಿದ್ದಾರೆ.