ಬಳ್ಳಾರಿ:-:ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಅಕ್ರಮವಾಗಿ ನಗದು ಸಾಗಾಟ ಮಾಡುವ ಪ್ರಕರಣಗಳು ಪತ್ತೆಯಾಗುತ್ತಿವೆ.
ಬಳ್ಳಾರಿಯಿಂದ ಆಂಧ್ರದ ಅದೋನಿ ಕಡೆ ಸಾಗಿಸುತ್ತಿದ್ದ ದಾಖಲೆ ರಹಿತ 26 ಕೆಜಿ ಬೆಳ್ಳಿ, 3 ಲಕ್ಷ 55 ಸಾವಿರ ನಗದು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿಕೊಂಡಿ ಈ ಬೆಳ್ಳಿ 10ಲಕ್ಷ ಮೌಲ್ಯದ್ದು ಅಂತಾ ಅಂದಾಜಿಸಲಾಗಿದೆ. AP 21 AX 9388 ನಂಬರಿನ ಕಾರಿನಲ್ಲಿ ಸಾಗಿಸ್ತಿದ್ದಾಗ ಸೀಜ್ ಮಾಡಲಾಗಿದ್ದು, ಮೋಕಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.