ಬಳ್ಳಾರಿ:– ಲೋಕಸಭಾ ಚುನಾವಣೆ 2024 ರ ಹಿನ್ನೆಲೆ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು, ಇಟ್ಟಗಿಹಾಳ್ ಚೆಕ್ ಪೋಸ್ಟ್ನಲ್ಲಿ 1.63 ಲಕ್ಷ ಹಣ ಸೀಜ್ ಮಾಡಿದ್ದಾರೆ.
ವಶಕ್ಕೆ ಪಡೆದ ಹಣಕ್ಕೆ ಯಾವುದೇ ದಾಖಲೆ ಒದಗಿಸದ ಹಿನ್ನೆಲೆ 1.63 ಲಕ್ಷ ಹಣ ಸೀಜ್ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಇಟ್ಟಗಿಹಾಳ್ ಚೆಕ್ ಪೋಸ್ಟ್ನಲ್ಲಿ ಘಟನೆ ಜರುಗಿದೆ. ಆಭರಣ ಪ್ಯಾಪಾರಿ ಮೋಹಿನ್ ಎಂಬುವರಿಗೆ ಸೇರಿದ ಹಣ ಇದಾಗಿದೆ ಎನ್ನಲಾಗಿದೆ. ನಗದು ವಶಕ್ಕೆ ಪಡೆದು ಚುನಾವಣಾ ಅಧಿಕಾರಿಗಳಿಂದ ವಿಚಾರಣೆ ನಡೆಯುತ್ತಿದ್ದು, ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.