ಟಾಲಿವುಡ್ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾಗಳ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕೆಲ ಸಮಯ ಕಳೆದಿದ್ದಾರೆ. ಬ್ಯುಸಿ ಶೆಡ್ಯೂಲ್ ಮಧ್ಯೆಯೇ ಕಡಲ ತೀರದ ಬಳಿ ಪತ್ನಿ ಉಪಾಸನಾ ಮತ್ತು ಮಗಳು ಕ್ಲಿಂಕಾರರೊಂದಿಗೆ ಎಂಜಾಯ್ ಮಾಡಿದ್ದಾರೆ.
ರಾಮ್ ಚರಣ್ ತಮ್ಮ ಮುದ್ದಾದ ಕುಟುಂಬದ ಜೊತೆಗೆ ಬೀಚ್ ನ್ಲಿ ಮೋಜು-ಮಸ್ತಿ ಮಾಡಿದ್ದಾರೆ.
ನಟ ರಾಮ್ಚರಣ್ ಹಾಗೂ ಉಪಾಸನಾ ಜೋಡಿ ಮದುವೆಯಾದ 11 ವರ್ಷಗಳ ನಂತರ ಪೋಷಕರಾಗಿದ್ದಾರೆ. ಕಳೆದ ವರ್ಷ ಈ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ. ಈ ದಂಪತಿ ತಮ್ಮ ಪುಟ್ಟ ಮಗಳ ಜೊತೆಗೆ ವೈಜಾಗ್ನ ಬೀಚ್ ಗೆ ತೆರೆಳಿ ಸಮಯ ಕಳೆದಿದ್ದಾರೆ. ಇದೇ ವೇಳೆ ರಾಮ್ ಚರಣ್ ಮಗಳಿಗೆ ನೀರಿನ ಅಲೆಗಳನ್ನು ತೋರಿಸಿ ಆಕೆಯ ಪಾದಗಳನ್ನು ನೀರಿನಲ್ಲಿ ಒದ್ದೆ ಮಾಡಿಸಿದ್ದಾರೆ.