ಮಧುಮೇಹ, ಹೃದಯ ಕಾಯಿಲೆಗಳಂತಹ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಗಸಗಸೆ ಉಪಯುಕ್ತ.
ಮೆದುಳಿನ ದಕ್ಷತೆ: ಮೆದುಳಿಗೆ ನರಗಳು ಮತ್ತು ರಕ್ತ ಕಣಗಳ ಹರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಗಸಗಸೆ ಹೊಂದಿದೆ. ಮಿದುಳಿನ ನರ ಕೋಶಗಳು ಉತ್ತೇಜಿತಗೊಂಡಂತೆ, ಮೆದುಳಿನ ದಕ್ಷತೆಯು ಹೆಚ್ಚಾಗುತ್ತದೆ. ಹಾಗಾಗಿ ಗಸಗಸೆಯನ್ನು ಹಾಲಿನಲ್ಲಿ ಕುದಿಸಿ ತಿನ್ನುವುದರಿಂದ ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ವಯಸ್ಕರು ಗಸಗಸೆ ಬೀಜದ ಹಾಲನ್ನು ಸೇವಿಸುವುದರಿಂದ ಪ್ರಯೋಜನ ಪಡೆಯುತ್ತಾರೆ.
ಮೂಳೆಗಳ ಆರೋಗ್ಯ: ಗಸಗಸೆಯಲ್ಲಿ ಕ್ಯಾಲ್ಸಿಯಂ ಮತ್ತು ತಾಮ್ರ ಸಮೃದ್ಧವಾಗಿದೆ. ಮೂಳೆಗಳ ಆರೋಗ್ಯಕ್ಕೆ ಈ ಎರಡೂ ಪೋಷಕಾಂಶಗಳು ಮುಖ್ಯ. ಜೊತೆಗೆ ಮೂಳೆಗಳ ನಡುವಿನ ಸಂಯೋಜಕ ಅಂಗಾಂಶವನ್ನು ಬಲಪಡಿಸುತ್ತದೆ. ಇದರಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.
ರಕ್ತ ಪರಿಚಲನೆ: ಗಸಗಸೆ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಹಾನಿಕಾರಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಉತ್ತಮ ಎಚ್ ಡಿ ಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಸಗಸೆ ಬೀಜಗಳಲ್ಲಿ ಕಬ್ಬಿಣದ ಅಂಶವೂ ಸಮೃದ್ಧವಾಗಿದೆ. ಆದ್ದರಿಂದ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
ನಿದ್ರಾಹೀನತೆ: ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಗಸಗಸೆಯನ್ನು ಹೆಚ್ಚು ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ಶಾಂತ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ: ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ವಿಟಮಿನ್ ಸಿ ಯಷ್ಟೇ ಸತುವು ಮುಖ್ಯವಾಗಿದೆ. ಗಸಗಸೆ ಬೀಜಗಳಲ್ಲಿ ಸತುವು ಸಮೃದ್ಧವಾಗಿದ್ದು, ಇದನ್ನು ಆಗಾಗ ಸೇರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ರಾತ್ರಿಯಲ್ಲಿ ಗಸಗಸೆಯನ್ನು ಪುಡಿಮಾಡಿ ಹಾಲಿನಲ್ಲಿ ಕುದಿಸಿ ಕುಡಿಯಿತಿರಿ. ಇದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.