ಇತ್ತೀಚೆಗೆ ಪಂಜಾಬ್ ನ ಖ್ಯಾತ ಗಾಯಕ ಮೃತ ಸಿಧು ಮೂಸೆವಾಲಾ ಪೋಷಕರು ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಕೇಂದ್ರವು ಐವಿಎಫ್ ಮೂಲಕ ಗರ್ಭ ಧರಿಸಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ.
ಕಳೆದ ವಾರ ಸಿಧು ಮೂಸ್ ವಾಲಾ ಪೋಷಕರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಐವಿಎಫ್ ವಿಧಾನದ ಮೂಲಕ ಮಗುವನ್ನು ಗರ್ಭಧರಿಸಲು ವಯಸ್ಸಿನ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ.
ಮಗುವಿನ ಬಗ್ಗೆ ದಾಖಲೆಗಳಿಗಾಗಿ ಜಿಲ್ಲಾಡಳಿತವು ತನಗೆ ಕಿರುಕುಳ ನೀಡುತ್ತಿದೆ ಎಂದು ಗಾಯಕನ ತಂದೆ ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ. ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಕೊಂದ ಸುಮಾರು ಎರಡು ವರ್ಷಗಳ ನಂತರ, ದಂಪತಿಗೆ ಕಳೆದ ಶನಿವಾರ ಮಗು ಜನಿಸಿತು. 58 ವರ್ಷದ ಚರಣ್ ಸಿಂಗ್ ಇನ್-ವಿಟ್ರೊ ಫಲೀಕರಣ (ಐವಿಎಫ್) ತಂತ್ರದ ಮೂಲಕ ಮಗುವನ್ನು ಗರ್ಭಧರಿಸಿದ್ದರು ಎಂದು ಸಂಬಂಧಿಕರು ಈ ವರ್ಷದ ಆರಂಭದಲ್ಲಿ ತಿಳಿಸಿದ್ದರು.