ಗದಗ: ಗಜೇಂದ್ರಗಡ ಸಮೀಪದ ಚಿಲಝರಿ ಕ್ರಾಸ್ನಲ್ಲಿ ಇರುವ ಚೆಕ್ಪೋಸ್ಟ್ನಲ್ಲಿ 1ಲಕ್ಷ 32 ಸಾವಿರ ಹಣ ಸಿಕ್ಕಿದೆ. ಹುಬ್ಬಳ್ಳಿಯಿಂದ ಗಜೇಂದ್ರಗಡ ಪಟ್ಟಣಕ್ಕೆ ಬರುತ್ತಿದ್ದ ಟಾಟಾಏಸ್ ವಾಹನದಲ್ಲಿ ಈ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಮೂಲದ ಮಹಮ್ಮದ್ ಗೌಸ್ ಈ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಸಾರಿಗೆ ಸಂಸ್ಥೆಯ ಬಸ್ನಲ್ಲಿ ಅಕ್ರಮವಾಗಿ ಎರಡು ಕೆ.ಜಿ ತೂಕದ ಬೆಳ್ಳಿ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಗದಗ ನಗರದಿಂದ ಗಜೇಂದ್ರಗಡ ಪಟ್ಟಣಕ್ಕೆ ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಯಾವುದೇ ದಾಖಲೆ ಇಲ್ಲದೆ ಗದಗ ಮೂಲದ ಗುರುವಂಧನ್ ಎಂಬುವವರು ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹಣ ಹಾಗೂ ಬೆಳ್ಳಿ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಈ ಎರಡು ಪ್ರಕರಣಗಳು ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.