ಶಿವಮೊಗ್ಗ: ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಸದ್ಯ ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಪರ ಪ್ರಚಾರಕ್ಕೆ ದುಮುಕಿದ್ದು, ಕಾರೇಹಳ್ಳಿ ಯಿಂದ ಭದ್ರಾವತಿ ವರೆಗೂ ಕಾಂಗ್ರೆಸ್ ಬೃಹತ್ ಮೆರವಣಿಗೆ ನಡೆಸಿದರು.
ಮೆರವಣಿಗೆ ಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಸುಮಾರು 5 ಕಿ.ಮೀ ನಡೆದ ಬೈಕ್ ರ್ಯಾಲಿ ನಡೆಸಿದರು. ಇನ್ನೂ ಪತ್ನಿ ಗೆ ನಟ ಶಿವರಾಜ್ ಕುಮಾರ್ ಸಾತ್ ನೀಡಿದ್ದು, ಮೆರವಣಿಗೆ ಯಲ್ಲಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕ ಸಂಗಮೇಶ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.