ಬೆಂಗಳೂರು : ನನ್ನನ್ನು ಕಿಂಗ್ ಅನ್ನಬೇಡಿ, ನನಗೆ ಮುಜುಗರ ಆಗುತ್ತದೆ ಎಂದು ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ವಿರಾಟ್ ಕೊಹ್ಲಿ ಕೆಲವು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಈ ಸಮಾರಂಭದಲ್ಲಿ ನಿರೂಪಕರು, ಹೇಗೆನ್ನಿಸುತ್ತಿದೆ ಕಿಂಗ್ ಕೊಹ್ಲಿ? ಎಂದು ವಿರಾಟ್ಗೆ ಕೇಳುತ್ತಾರೆ. ಈ ವೇಳೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಏಕಾಏಕಿ ‘ಕೊಹ್ಲಿ.. ಕೊಹ್ಲಿ..’ ಎಂದು ಜೈಕಾರ ಕೂಗುತ್ತಾರೆ.
ಬಳಿಕ ಮಾತು ಮುಂದುವರಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳೇ ಶಾಂತವಾಗಿರಿ. ನಾವು ಬೇಗ ಚೆನ್ನೈಗೆ ತೆರಳಬೇಕಿದೆ ಎಂದರು. ಅಲ್ಲದೆ, ನಿರೂಪಕರನ್ನುದ್ದೇಶಿಸಿ, ನೀವು ‘ನನ್ನನ್ನು ಕಿಂಗ್ ಅನ್ನಬೇಡಿ. ಆ ರೀತಿ ನೀವು ಕರೆದರೆ ನನಗೆ ಮುಜುಗರವಾಗುತ್ತದೆ. ವಿರಾಟ್ ಅಂತ ಕರೆಯಿರಿ’ ಎಂದು ಕೋರಿದ್ದಾರೆ.
ಹೊಸ ಜೆರ್ಸಿಯಲ್ಲಿ ವಿರಾಟ್ ಮಿಂಚು
ಇದೇ ವೇಳೆ ಐಪಿಎಲ್-2024ಗಾಗಿ ಆರ್ಸಿಬಿ ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು. ವಿರಾಟ್ ಕೊಹ್ಲಿ ಸೇರಿದಂತೆ ಆರ್ಸಿಬಿ ತಂಡದ ಆಟಗಾರರು ಹೊಸ ಜೆರ್ಸಿ ತೊಟ್ಟು ಫೋಸ್ ನೀಡಿದರು. ಜೆರ್ಸಿಯನ್ನು ಕೆಂಪು ಹಾಗೂ ನೀಲಿ ಬಣ್ಣಗಳ ಸಂಯೋಜನೆಯಲ್ಲಿ ವಿನ್ಯಾಸ ಮಾಡಲಾಗಿದೆ.