ಬೆಂಗಳೂರು:- ಪಕ್ಕದ ಮನೆಯ ದಂಪತಿ ಸರಸ ಸಲ್ಲಾಪದಿಂದ ಕಿರಿಕಿರಿಯಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿರುವ ವಿಚಿತ್ರ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಮಹಿಳೆ ದೂರಿನ ಅನ್ವಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆವಲಹಳ್ಳಿ, ಬಿಡಿಎ ಲೇಔಟ್ ನಲ್ಲಿ ಮಹಿಳೆ ವಾಸವಾಗಿದ್ದಾರೆ. ಮಹಿಳೆಯ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್ ರೂಮ್ ಇದೆ. ಪಕ್ಕದ ಮನೆಯಲ್ಲಿ ವಾಸವಾಗಿರುವ ದಂಪತಿ ಬೆಡ್ ರೂಮ್ ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುವ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಂಡಿದ್ದಾರೆ.
ಈ ಬಗ್ಗೆ, ಬಹಳ ಮುಜುಗರಕ್ಕೆ ಒಳಗಾಗಿ ಮಹಿಳೆ, ದಯವಿಟ್ಟು ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಿಂದಿಸಿದ್ದಾನೆ. ಅಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಕೊಲೆ, ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪಕ್ಕದ ಮನೆಯ ಮನೆ ಮಾಲೀಕ ಚಿಕ್ಕಣ್ಣ ಮತ್ತು ಅವರ ಮಗ ಮಂಜುನಾಥ್ ಮಹಿಳೆ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೆ ಕೆಲವು ಯುವಕರನ್ನು ಕರೆಸಿ, ಎಲ್ಲರೂ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಮತ್ತು ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ಕೋರಿ ಮಹಿಳೆ ದೂರು ನೀಡಿದ್ದಾರೆ.