ನನಗೂ ವಿರಾಟ್ ಕೊಹ್ಲಿಗೂ ಹೋಲಿಕೆ ಇಲ್ಲ , ದಯವಿಟ್ಟು ಅಂತ ದಿಗ್ಗಜರಿಗೆ ನನ್ನನ್ನು ಹೊಲೀಸಬೇಡಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.
ಐಪಿಎಲ್ನಲ್ಲಿ ಪುರುಷರ ತಂಡ ಮಾಡಲಾಗದ ಸಾಧನೆಯನ್ನು ಮಹಿಳಾ ಐಪಿಎಲ್ ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡ ಮಾಡಿದೆ.
ಕೊನೆಗೂ ಈ ಸಲ ಕಪ್ ನಮ್ದೆ ಎನ್ನುವ ವಾಕ್ಯಕ್ಕೆ ಆರ್ಸಿಬಿ ಕ್ರಿಕೆಟಿಗರು ನ್ಯಾಯ ಒದಗಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ. ಇದರ ನಡುವ ಆರ್ಸಿಬಿ ವುಮೆನ್ಸ್ ತಂಡದ ಕ್ಯಾಪ್ಟನ್ ಸ್ಮೃತಿ ಮಂಧನಾ ಅವರನ್ನು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಅದಲ್ಲದೆ, ಸ್ಮೃತಿ ಮಂದನಾ ಅವರು ಧರಿಸುವ ಜೆರ್ಸಿ ನಂಬರ್ 18. ವಿರಾಟ್ ಕೊಹ್ಲಿ ಕೂಡ ಇದೇ ನಂಬರ್ನ ಜೆರ್ಸಿಯನ್ನು ಧರಿಸುತ್ತಾರೆ. ಇದೇ ಕಾರಣಕ್ಕಾಗಿ ಸ್ಮೃತಿ ಮಂಧನಾ ಹಾಗೂ ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಸ್ಮೃತಿ ಮಂಧನಾ ಮಾತನಾಡಿದ್ದಾರೆ.
ಪ್ರಶಸ್ತಿ ಗೆದ್ದಿರುವುದು ಒಂದು ಕಡೆಯಾದರೆ, ಇನ್ನೊಬ್ಬ ನಂ.18 ಭಾರತಕ್ಕೆ ಮಾಡಿರುವ ಸಾಧನೆ ಇದರ ಮುಂದೆ ಏನೇನೂ ಅಲ್ಲ. ಅದು ಬಹಳ ದೊಡ್ಡ ವಿಚಾರ. ನನ್ನ ಪ್ರಕಾರ ಇಂಥದ್ದೊಂದು ಹೋಲಿಕೆಯೇ ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ನನ್ನ ಕ್ರಿಕೆಟ್ ಕೆರಿಯರ್ಗೂ ಸಾಧನೆಗಳೇ ತುಂಬಿರುವ ವಿರಾಟ್ ಕೊಹ್ಲಿ ಕೆರಿಯರ್ಗೂ ಹೋಲಿಕೆಯೇ ಅಲ್ಲ. ನನಗೆ ಯಾವ ಕಾರಣಕ್ಕಾಗಿ ಈ ಹೋಲಿಕೆ ಇಷ್ಟವಿಲ್ಲ ಎಂದರೆ, ಅವರು ಮಾಡಿರುವ ಸಾಧನೆಗಳು ಬಹಳ ಅದ್ಭುತವಾದವುಗಳು. ಅಲ್ಲದೆ, ದೊಡ್ಡ ಸ್ಪೂರ್ತಿದಾಯಕ ವ್ಯಕ್ತಿ. ಕೇವಲ ಪ್ರಶಸ್ತಿ ಗೆಲ್ಲೋದು ಆಟಗಾರನಲ್ಲಿನ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಾವೆಲ್ಲರೂ ವಿರಾಟ್ ಕೊಹ್ಲಿಯನ್ನು ಗೌರವಿಸ್ತೇವೆ. ಅದಲ್ಲದೆ, ಭಾರತೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗೆ ಇರಬೇಕಾದ ಗೌರವ ಎಂದಿಗೂ ಇರುತ್ತದೆ ಎಂದು ಸ್ಮೃತಿ ಹೇಳಿದ್ದಾರೆ.