ಗದಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಗದಗ ಜಿಲ್ಲೆಯಾದ್ಯಂತ 12 ಚೆಕ್ ಪೋಸ್ಟ್ ಮೂಲಕ ಕಣ್ಣಗಾವಲು ಇರಿಸಿದ್ದು, ಗದಗ ತಾಲೂಕಿನ ದುಂದೂರು ಚೆಕ್ ಪೋಸ್ಟ್ ಕೆ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿಯೇ ಪೊಲೀಸರು ಬಿಡುತ್ತಿದ್ದಾರೆ. ಅಕ್ರಮ ಹಣ ಮದ್ಯ ಸೇರಿದಂತೆ ಗಿಫ್ಟ್ ವಸ್ತುಗಳ ಮೇಲೆ ನಿಗಾ ಇಡಲಾಗಿದ್ದು, ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಹಗಲು ರಾತ್ರಿ ವಾಹನಗಳ ಮೇಲೆ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.