ಬೆಳಗಾವಿ:- ಬಿಜೆಪಿ ನಾಯಕರು ಯಾರು ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಬಿಜೆಪಿ ಪಾಠ ಕಲಿತಿಲ್ಲ, ಯಾಕೆಂದರೆ ಆಗ ಆಗ ನಿರ್ಮಾಣವಾಗಿದ್ದ ಸ್ಥಿತಿಯೇ ಈಗಲೂ ನಿರ್ಮಾಣವಾಗಿದೆ, ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ, ಅದನ್ನ ಬಿಜೆಪಿ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಆಗ ಮಾಡಿದ ತಪ್ಪನ್ನೇ ಈಗಲೂ ಮಾಡುತ್ತಿದ್ದಾರೆ, ಇದು ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ನೆರವಾಗಲಿದೆ ಎಂದು ಹೇಳಿದರು.
ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅದು ಸಿಗದ ಕಾರಣ ತೀವ್ರವಾಗಿ ಬೇಸರಗೊಂಡು ಬಂಡಾಯ ಪ್ರವೃತ್ತಿ ಪ್ರದರ್ಶಿಸುತ್ತಿರುವುದು ನಿಜವಾದರೂ, ಇದುವರೆಗೆ ಯಾರೂ ಕಾಂಗ್ರೆಸ್ ಸೇರುವ ಪ್ರಯತ್ನಕ್ಕೆ ಮುಂದಾಗಿಲ್ಲ, ಆದರೆ ಬರುವವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದರು.