ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 400 ಬೌಂಡರಿಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಐರ್ಲೆಂಡ್ ನ ಹಿರಿಯ ಬ್ಯಾಟ್ಸ್ಮನ್ ಪಾಲ್ ಸ್ಟರ್ಲಿಂಗ್ ಬರೆದಿದ್ದಾರೆ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಐರ್ಲೆಂಡ್ ಪರ ನಾಯಕನ ಇನಿಂಗ್ಸ್ ಆಡಿದ ಪಾಲ್ ಸ್ಟರ್ಲಿಂಗ್ 27 ಎಸೆತಗಳಲ್ಲಿ 25 ರನ್ ಬಾರಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಸ್ಟರ್ಲಿಂಗ್ ಚುಟುಕು ಕ್ರಿಕೆಟ್ನಲ್ಲಿ 400 ಬೌಂಡರಿ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
ಅಫಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20-ಐ ಸರಣಿಯ ಮೊದಲನೇ ಪಂದ್ಯ ಮಾರ್ಚ್ 15( ಶುಕ್ರವಾರ) ಶಾರ್ಜಾದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ನಾಯಕ ಈ ದಾಖಲೆ ಬರೆದಿದ್ದಾರೆ.
ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಆಟಗಾರರು
* 401- ಪಾಲ್ ಸ್ಟರ್ಲಿಂಗ್- ಐರ್ಲೆಂಡ್-135 ಪಂದ್ಯ
* 395- ಬಾಬರ್ ಆಝಮ್- ಪಾಕಿಸ್ತಾನ- 109 ಪಂದ್ಯ
* 361- ವಿರಾಟ್ ಕೊಹ್ಲಿ-ಭಾರತ- 117 ಪಂದ್ಯ
* 359- ರೋಹಿತ್ ಶರ್ಮಾ- ಭಾರತ- 151 ಪಂದ್ಯ
* 320- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ-120 ಪಂದ್ಯ