ಬೆಂಗಳೂರು: ನಾನು ಯಶವಂತಪುರ ಎಂಎಲ್ಎ ಆಗಿದ್ದೆ.ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ವಲಸಿಗರು ಅನ್ನೋ ಪ್ರಶ್ನೆ ಬರೋದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರು ಯಾರನ್ನ ಸಂಪರ್ಕ ಮಾಡ್ತಿದ್ದಾರೆ ಗೊತ್ತಿಲ್ಲ.
ಸದಾನಂದಗೌಡರು ಸಿಎಂ ಆದವರು.ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿ ವಹಿಸಿದವರು.ಮೋದಿ ಅವರನ್ನ ಪ್ರಧಾನಿ ಮಾಡಬೇಕು ಅನ್ನೋದು ಎಲ್ಲರ ಗುರಿ.ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ ಎಂದರು.
Sadananda Gowda: ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದು ನಿಜ: ಸತ್ಯ ಒಪ್ಪಿಕೊಂಡ ಡಿವಿಎಸ್
ಸೋಮಶೇಖರ್ ಅವರ ವಿರುದ್ಧ ಕ್ರಮ ಆಗದ ವಿಚಾರವಾಗಿ ಮಾತನಾಡಿದ ಅವರು,ಕ್ರಮವನ್ನ ನಾವು ಮಾತ್ರವಲ್ಲ, ಸ್ಪೀಕರ್ ಅವರು ತೆಗೆದುಕೊಳ್ಳಬೇಕು. ಸೋಮಶೇಖರ್ ರಾಜ್ಯಸಭೆಗೆ ಕಾಂಗ್ರೆಸ್ಗೆ ಮತ ಹಾಕಿದ ಮೇಲೆ ಅವರೇ ಹೊರಗೆ ಹೋಗಬೇಕಿತ್ತು.ಈಗ ಚುನಾವಣೆ ಮಾಡ್ತೀವಿ, ಮುಂದೆ ಏನು ಮಾಡಬೇಕು ಮಾಡ್ತೀವಿ ಎಂದು ಹೇಳಿದ್ದರು.
ನಾನು ಯಶವಂತಪುರ ಎಂಎಲ್ಎ ಆಗಿದ್ದೆ.ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ವಲಸಿಗರು ಅನ್ನೋ ಪ್ರಶ್ನೆ ಬರೋದಿಲ್ಲ ಎಂದರು.