ಐಐಟಿ, ಐಐಐಟಿ, ಎನ್ಐಟಿಯಂತಹ ವಿಶೇಷ ಎಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಜೆಇಇ ಮುಖ್ಯ ಪರೀಕ್ಷೆಯು ಏಪ್ರಿಲ್ ನಡೆಯಲಿದೆ. ಈ ವರ್ಷ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಸೆಷನ್ 1ರ ಮುಖ್ಯ ಪರೀಕ್ಷೆಯಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜೆಇಇ ಸೆಷನ್ 2ರ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ 12 ಲಕ್ಷಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತದೆ.
ಜೆಇಇ ಪರೀಕ್ಷೆಯನ್ನು ಎನ್ ಟಿಎ ಅಂದರೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುತ್ತದೆ. ಜೆಇಇ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ಅಪ್ಡೇಟ್ ಗಳನ್ನು ಅಧಿಕೃತ ವೆಬ್ಸೈಟ್ https://jeemain.nta.ac.in/ ನಲ್ಲಿ ಪರಿಶೀಲಿಸಬಹುದು. ಎನ್ ಟಿಎ ಶೀಘ್ರದಲ್ಲೇ ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರೊಂದಿಗೆ ಅಭ್ಯರ್ಥಿಗಳು ಜೆಇಇ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿದೆ ಮಾಹಿತಿ .
ಜೆಇಇ ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ನ ಪ್ರಯೋಜನವೇನು?
ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ ಅನ್ನು ಆನ್ಲೈನ್ ಮೋಡ್ನಲ್ಲಿ ಅಧಿಕೃತ ವೆಬ್ಸೈಟ್ https://jeemain.nta.ac.in/ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಅಗತ್ಯವಿರುವ ವಿವರಗಳೊಂದಿಗೆ ಲಾಗ್ ಇನ್ ಮಾಡುವ ಮೂಲಕ, ನೀವು ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಜೆಇಇ ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ನಿಂದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ.
ಜೆಇಇ ಸೆಷನ್ 2ರ ಮುಖ್ಯ ಪರೀಕ್ಷೆ ಯಾವಾಗ ನಡೆಯಲಿದೆ?
ಎನ್ ಟಿ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿಯನ್ನು ತಯಾರು ಮಾಡಿದೆ. ಸಿಬಿಎಸ್ಇ ಬೋರ್ಡ್ ಪರೀಕ್ಷೆ ಹಿನ್ನೆಲೆ ಈ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ. ಈ ಪರೀಕ್ಷೆ ಏಪ್ರಿಲ್ 04 ರಿಂದ ಏಪ್ರಿಲ್ 15, 2024 ರ ನಡುವೆ ನಡೆಯಲಿದೆ. ಎನ್ಟಿಎ ಜೆಇಇ ಮುಖ್ಯ ಪರೀಕ್ಷೆಯನ್ನು ಎರಡು ಪಾಳಿಯಲ್ಲಿ ನಡೆಯಲಿದೆ. ಜೆಇಇ ಮೊದಲ ಪಾಳಿ ಪರೀಕ್ಷೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಆದರೆ, ಎರಡನೇ ಪಾಳಿಯ ಪರೀಕ್ಷೆಯನ್ನು ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ನಡೆಸಲಾಗುತ್ತದೆ.
ಪ್ರವೇಶ ಪತ್ರ ಯಾವಾಗ ಬಿಡುಗಡೆಯಾಗಲಿದೆ?
ಜೆಇಇ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಸಿಟಿ ಸ್ಲಿಪ್ ಮತ್ತು ಪ್ರವೇಶ ಪತ್ರ ನಡುವಿನ ವ್ಯತ್ಯಾಸವನ್ನು ತಿಳಿದಿರಬೇಕು. ಪರೀಕ್ಷಾ ಸಿಟಿ ಸ್ಲಿಪ್ ಅನ್ನು ಪರೀಕ್ಷಾ ನಗರದ ಮಾಹಿತಿಗಾಗಿ ಮಾತ್ರ ನೀಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಪ್ರವೇಶ ಪತ್ರವಾಗಿ ಬಳಸಲಾಗುವುದಿಲ್ಲ. ಜೆಇಇ ಮುಖ್ಯ ಪ್ರವೇಶ ಪತ್ರ ಪರೀಕ್ಷೆಗೂ ಕೆಲವು ದಿನಗಳ ಮುನ್ನ ಬಿಡುಗಡೆಯಾಗುತ್ತದೆ.