ಆನೇಕಲ್: ಡಿಕೆ ಬ್ರದರ್ಸ್ ವರ್ಸಸ್ ದೋಸ್ತಿ ನಾಯಕರ ಜಿದ್ದಾಜಿದ್ದಿಯಿಂದ ಬೆಂಗಳೂರು ಗ್ರಾಮಾಂತರ ಕಣ ಈ ಬಾರಿ ರಣರಣ ಅಂತಿದೆ. ಆನೇಕಲ್ನ ಚಂದಾಪುರದಲ್ಲಿ ದೋಸ್ತಿನಾಯಕರು ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಮಾವೇಶದ ಬಳಿಕ ಶಾಸಕ ಮುನಿರತ್ನ (Muniratna) ಮಾತಾಡಿ, ಬಡವರ ರಕ್ತ ಹೀರಿದ ರೆಡ್ ಕಲರ್ ನಮಗೆ ಬೇಡ. ಲಕ್ಷಾಂತರ ಜನರ ಜೀವ ಉಳಿಸಿದ ವೈಟ್ ಕಲರ್ ಡಾ.ಮಂಜುನಾಥ್ ಬೇಕು ಅಂದ್ರು. ಮಾಗಡಿ ಬಾಲಕೃಷ್ಣ, ರಾಮನಗರದ ಇಕ್ಬಾಲ್ ಹುಸೇನ್ ವಿರುದ್ಧ ಕೆಂಡ ಕಾರಿದರು.
Karnataka Jobs Alert: ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ʼನ್ಯೂಸ್! 247 PDO ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಾಕ್ಟರ್ ಮಂಜುನಾಥ್ (Dr. C.N Manjunath) ಬಲಿಕಾ ಬಕ್ರಾ ಎಂಬ ಶಾಸಕ ಇಕ್ಬಾಲ್ ಹುಸೈನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಲೀಕಾ ಬಕ್ರಾ ಅಂದ್ರೆ ಏನು ಅಂತ ಅರ್ಥ ಗೊತ್ತಿದ್ಯಾ?. ಬಲಿ ಕೊಡೋದು ಅಂದ್ರೆ ಕುರಿಯನ್ನು ಸಾಯಿಸಿದ ಹಾಗೆ. ಡಾಕ್ಟರ್ ಮಂಜುನಾಥ್ ಅವರ ಸಾಧನೆ ಬಗ್ಗೆ ನಿಮಗೆ ಅರಿವಿದೆಯಾ?. ಅವರ ಬಗ್ಗೆ ಮಾತನಾಡುವ ಮುಂಚೆ ಆಲೋಚಿಸಬೇಕು ಎಂದು ವಾಗ್ದಾಳಿ ನಡೆಸಿದರು.