ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಮತಿ ಪ್ರಿಯಾಂಗಾ ರವರು ಅಧಿಕಾರ ವಹಿಸಿಕೊಂಡರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಭರತ್.ಎಸ್.ಭಾ.ಆ.ಸೇ ರವರು ಸರಕಾರದ ಆದೇಶದನ್ವಯ ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ,
ವರ್ಗಾವಣೆ ಹೊಂದಿದ ಪ್ರಯುಕ್ತ ಶ್ರೀಮತಿ ಪ್ರಿಯಾಂಗಾ.ಎಂ. ಭಾ.ಆ.ಸೇ, ರವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಕಾರ್ಯಾಭಾರವನ್ನು ವಹಿಸಿಕೊಂಡಿರುತ್ತಾರೆ. ಪ್ರಿಯಾಂಗ್ ಅವರು 2017 ನೇಯ ಬ್ಯಾಚಿನ ಕರ್ನಾಟಕ ಕೆಡರ್ ನ ಅಧಿಕಾರಿಯಾಗಿದ್ದು, ಈ ಹಿಂದೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.