16 ವರ್ಷದ ಕನಸು ಕೊನೆಗೂ ನನಸಾಗಿದ್ದು, RCBಗೆ ಕೊನೆಗೂ ಕಪ್ ಸಿಕ್ಕಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL 2024) 2ನೇ ಸೀಸನ್ನ ಪೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಚೊಚ್ಚಲ ಬಾರಿಗೆ ಡಬ್ಲ್ಯೂಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದೆ.
ಈ ಮೂಲಕ ಆರ್ಸಿಬಿ ಅಭಿಮಾನಿಗಳು 16 ವರ್ಷದಿಂದ ಕಾಯುತ್ತಿದ್ದ ಕಪ್ ಕೊನೆಗೂ ಮಹಿಳಾ ತಂಡ ಗೆಲ್ಲಿಸಿಕೊಟ್ಟಿದೆ. ಈ ಮೂಲಕ ದಶಕದ ಕನಸು ನನಸಾಗಿದೆ. ಇನ್ನು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಬದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಅಂತಿಮವಾಗಿ ತಂಡ 18.3 ಓವರ್ಗೆ 113 ರನ್ ಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಆರ್ಸಿಬಿ ತಂಡ 19.3 ಓವರ್ಗೆ 2 ವಿಕೆಟ್ ಕಳೆದುಕೊಂಡು 115 ರನ್ ಗಳಿಸುವ ಮೂಲಕ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಕಪ್ ಮುಡಿಗೇರಿಸಿದೆ.