ಆಂಧ್ರಪ್ರದೇಶ :- ಆಂಧ್ರ ಅಭಿವೃದ್ಧಿ ತರಲು ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ತನ್ನಿ ಎಂದು PM ಮೋದಿ ಹೇಳಿದ್ದಾರೆ.
ಕೋಟಪ್ಪಕೊಂಡದ ತ್ರಿಮೂರ್ತಿಗಳ ಆಶೀರ್ವಾದ ಸಿಕ್ಕಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಆಶೀರ್ವಾದ ನನಗೆ ಸಿಕ್ಕಿದೆ. ಜೂ.4ರ ಫಲಿತಾಂಶದಲ್ಲಿ 400ಕ್ಕೂ ಅಧಿಕ ಸೀಟ್ ಗೆಲ್ಲಬೇಕು. ಚಂದ್ರಬಾಬು, ಪವನ್ ಕಲ್ಯಾಣ್ನಿಂದ ಎನ್ಡಿಎ ಮೈತ್ರಿಗೆ ಮತ್ತಷ್ಟು ಬಲ ಬಂದಿದೆ. ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆಂಧ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಮ್ಮ 10 ವರ್ಷದ ಅವಧಿಯಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ. ಆಂಧ್ರ ಅಭಿವೃದ್ಧಿ ಆಗಬೇಕಾದರೆ ಡಬಲ್ ಇಂಜಿನ್ ಸರ್ಕಾರ ಅಗತ್ಯವಿದೆ. ಎನ್ಟಿಆರ್ ಜನ್ಮ ಶತಾಬ್ದಿ ಅಂಗವಾಗಿ ನಾಣ್ಯ ಬಿಡುಗಡೆ ಮಾಡಿದ್ದೇವೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ಗೆ ಭಾರತ ರತ್ನ ನೀಡಿ ಗೌರವ ನೀಡಲಾಗಿದೆ. ಎನ್ಟಿಆರ್, ಪಿ.ವಿ.ನರಸಿಂಹರಾವ್ರನ್ನು ಕಾಂಗ್ರೆಸ್ ಅವಮಾನಿಸಿದೆ. ಜಗನ್ ಸರ್ಕಾರ, ಕಾಂಗ್ರೆಸ್ ಪಕ್ಷ ಎರಡೂ ಒಂದೇ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರ, ಅಕ್ರಮಗಳಿಂದ ಆಂಧ್ರ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಬಾರಿ ಆಂಧ್ರ ಜನತೆ ಎರಡು ಸಂಕಲ್ಪಗಳನ್ನು ಕೈಗೊಳ್ಳಬೇಕು. ನೀವು ದೆಹಲಿ, ಆಂಧ್ರದಲ್ಲಿ ಎನ್ಡಿಎಯನ್ನು ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.
ದೇಶದಲ್ಲಿ ಎನ್ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಲನಾಡು ಇಲ್ಲಿ ಸುಮಾರು 5000 ಶಾಶ್ವತ ಮನೆಗಳನ್ನು ನಿರ್ಮಿಸಿ ಬಡವರಿಗೆ ಒದಗಿಸಲಾಗಿದೆ. ಸಾಕಷ್ಟು ಕುಟುಂಬಗಳಿಗೆ ನಲ್ಲಿ ಸಂಪರ್ಕ ಸಿಕ್ಕಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆಂಧ್ರಪ್ರದೇಶದಲ್ಲಿ 1.25 ಕೋಟಿಗೂ ಹೆಚ್ಚು ಬಡವರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಆಂಧ್ರಪ್ರದೇಶವನ್ನು ಅಭಿವೃದ್ಧಿ ಪಡೆಸುವುದೇ ಎನ್ಡಿಎ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಬಾರಿ ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದೆ. ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕು. ನೀವು ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶವನ್ನು ನೋಡಲು ಬಯಸಿದರೆ, ನೀವು ಎನ್ಡಿಎಗೆ 400+ ಸ್ಥಾನಗಳನ್ನು ಪಡೆಯಲು ಶ್ರಮಿಸಬೇಕು. ಪ್ರಾದೇಶಿಕ ಭಾವನೆಗಳು ಮತ್ತು ರಾಷ್ಟ್ರೀಯ ಭಾವನೆಗಳನ್ನು ಸೇರಿಸಿಕೊಂಡು ಎನ್ಡಿಎ ಮೈತ್ರಿಕೂಟ ಮುನ್ನಡೆಯಲಿದೆ ಎಂದರು.