ಬೆಳಗಾವಿ:- ಟಿಳಕವಾಡಿ ಪೊಲೀಸರು ಕಾರ್ಯಚರಣೆ ನಡೆಸಿ ಬೆಳಗಾವಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಿಷೇಧಿತ MDMA ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ರಿಜ್ವಾನಾಖಾನ್ ಪಠಾಣ್ ಎಂಬಾತನನ್ನ ಬಂಧಿಸಲಾಗಿದೆ. ಇತ ಸಾರ್ವಜನಿಕವಾಗಿಯೇ ನಿಷೇಧಿತ ಕ್ರಿಸ್ಟಲ್ ಮೆಥಾಂಫೆಟಮೈನ್ ಮಾದಕ ವಸ್ತುವನ್ನ ಮಾರಾಟ ಮಾಡುತ್ತಿದ್ದ.
ಇನ್ನು ಬಂಧಿತ ಆರೋಪಿ ಇದನ್ನು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ದ ಎನ್ನುವ ಆಯಾಮದಲ್ಲಿ ತನಿಖೆ ಶುರುವಾಗಿದೆ. ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದೇ ಮೊದಲ ಸಲ ಬೆಳಗಾವಿಯಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.