ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಅಪ್ಪು ಸರ್ಕಲ್ ನಲ್ಲಿ ಕರ್ನಾಟಕ ರತ್ನ ಡಾ ಪುನೀತ ರಾಜಕುಮಾರ ಗೆಳೆಯರ ಬಳಗದ ವತಿಯಿಂದ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ತಾಪಂ ಮಾಜಿ ಸದಸ್ಯ ಗುರು ಮರಡಿಮಠ ಮಾತನಾಡಿ ಕನ್ನಡ ಚಲನಚಿತ್ರ ರಂಗದ ಅಪ್ರತಿಮ ಕಲಾವಿದರು,
ಮರೆಯಲಾಗದ ಮಾಣಿಕ್ಯನ ಜನ್ಮ ದಿನಾಚರಣೆಯನ್ನು ಇಡಿ ಕರ್ನಾಟಕದಾದ್ಯಂತ ಇಂದು ಆಚರಿಸಲಾಗುತ್ತಿದೆ ಇಂತಹ ಮೇರು ಕಲಾವಿದ ಪುನೀತ ರಾಜಕುಮಾರವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಅವರು ಕೇವಲ ಚಲನಚಿತ್ರರಂಗ ಅಷ್ಟೇ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸೇವೆಸಲ್ಲಿಸುವ ಮೂಲಕ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ,
ಇಂದು ಅವರು ಇಲ್ಲವೆಂಬುಂದೆ ನಮಗೆಲ್ಲಾ ನೋವಿನ ಸಂಗತಿ ಎಂದರು. ಗ್ರಾಪಂ ಸದಸ್ಯ ದಾನಪ್ಪ ಆಸಂಗಿ ಮಾತನಾಡಿ ಮುಂದಿನ ವರ್ಷದ ಜನ್ಮ ದಿನಾಚರಣೆಯೊಳಗೆ ನಾವೆಲ್ಲರೂ ಸೇರಿ ನಮ್ಮ ಗ್ರಾಮದ ಸರ್ಕಲ್ ನಲ್ಲಿ ಪುನೀತ ರಾಜಕುಮಾರ ಅವರ ಪುತ್ಥಳಿ ನಿರ್ಮಿಸೊಣವೆಂದರು,ಜನ್ಮದಿನಾಚಾರಣೆ ಅಂಗವಾಗಿ ಅಪ್ಪು ಗೆಳೆಯರ ಬಳಗದವರು ಅನ್ನಸಂತರ್ಪಣೆ ಏರ್ಪಡಿಸಿದರು,
ಇದೇ ಸಂದರ್ಭದಲ್ಲಿ ಬಸವರಾಜ ಗಣಿ,ಪಾಂಡುರಂಗ ಹೂಗಾರ,ರಾಜು ಕದಂ,ಸಿದ್ದು ಕಂಚು,ಶ್ರೀಶೈಲ ವಾಲಿ ಸಿದ್ದು ಸಣಫೇಟಿ ,ಸುಭಾಸ ಕಂಪು,ಸದಾಶಿವ ಮಗದುಮ್,ಬಸಲಿಂಗ ಭೂಮಕ್ಕನವರ,ಸದಾಶಿವ ರಾ ಕಂಪು,ಬಸಪ್ಪ ಬಳವಾಡ,ಸಿದ್ದು ಹಳ್ಳಿ,ಮಲ್ಲು ಕಂಪು ಮಹಾದೇವ ಸಂಗಾನಟ್ಟಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ