ಬಾಗಲಕೋಟೆ:- ಹಣ ಕಳ್ಳತನವಾಗಿದೆ ಎಂದು ಸಮವಸ್ತ್ರ ಬಿಚ್ಚಿಸಿ ಶಿಕ್ಷಕಿಯರು ಪರಿಶೀಲನೆ ನಡೆಸಿದ್ದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ದಿವ್ಯಾ ಬಾರಕೇರ(14) ಆತ್ನಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಾರ್ಚ್ 16 ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.
ಆ ಶಿಕ್ಷಕಿಯ 2 ಸಾವಿರ ರೂ ಶಾಲೆಯಲ್ಲಿ ಕಳೆದು ಹೋಗಿತ್ತು. ಆದರೆ ಶಿಕ್ಷಕಿಗೆ ವಿದ್ಯಾರ್ಥಿನಿಯರ ಮೇಲೆ ಸಂಶಯ. ಇದರಿಂದ ಐದು ಜನ ವಿದ್ಯಾರ್ಥಿನಿಯರ ಸಮವಸ್ತ್ರ ಬಿಚ್ಚಿ ಚೆಕ್ ಮಾಡಿದ್ದಾರಂತೆ. ಜೊತೆಗೆ ದೇವರ ಮೇಲೆ ಆಣೆ ಮಾಡಿಸಿದ್ದಾರಂತೆ. ಅವಮಾನದಿಂದ ಇದರಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಮೇಲೆ ಬಂದ ಸುಳ್ಳು ಆರೋಪಕ್ಕೆ ಬಾಲಕಿ ತನ್ನ ಜೀವವನ್ನು ತಾನೆ ಅಂತ್ಯ ಮಾಡಿಕೊಂಡಿದ್ದಾಳೆ. ಇದರಿಂದ ಬಾಲಕಿಯ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗಳ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಈ ವಿದ್ಯಾರ್ಥಿನಿ ಹೆಸರು ದಿವ್ಯಾ ಬಾರಕೇರ, 14 ವರ್ಷ ವಯಸ್ಸು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಆಕೆಯ ಶಿಕ್ಷಕಿಯೇ ಕಾರಣರಾಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಕದಂಪುರ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಕದಂಪುರ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಇವರ 2 ಸಾವಿರ ಹಣ ಮಾರ್ಚ್ 14 ರಂದು ಕಳೆದಿತ್ತು. ಆಗ ಕನ್ನಡ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯಶಿಕ್ಷಕ ಇತರೆ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ಸಂಶಯ ಪಟ್ಟಿದ್ದರು. 10ನೇ ತರಗತಿಯ ನಾಲ್ವರು ಎಂಟನೇ ತರಗತಿಯ ದಿವ್ಯಾ ಮೇಲೆ ಸಂಶಯ ಪಟ್ಟಿದ್ದರು. ಹಣ ಯಾರು ಕಳ್ಳತನ ಮಾಡಿದ್ದೀರಿ ಕೊಡಿ ಎಂದು ಗದರಿಸಿದ್ದರು. ಸಾಲದು ಎಂಬಂತೆ ಸಮವಸ್ತ್ರ ಬಿಚ್ಚಿಸಿ ಚೆಕ್ ಮಾಡಿದ್ದಾರೆ. ಮೇಲಾಗಿ ಹಣ ಕೊಡದಿದ್ದರೆ ಟಿ.ಸಿ. ಕಿತ್ತು ಕೊಡೋದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅವಮಾನ ತಾಳದೆ ಎಂಟನೇ ತರಗತಿ ವಿದ್ಯಾರ್ಥಿನಿ ದಿವ್ಯಾ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಳಿ ಬೆಳಕಾಗಬೇಕಿದ್ದ ಮಗಳ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ